ಜನಗಣತಿ ಮತ್ತಷ್ಟು ವಿಳಂಬ ಸಾಧ್ಯತೆ

ನವದೆಹಲಿ,ಜ.6- ದಶಮಾನಕ್ಕೊಮ್ಮೆ ನಡೆಯುವ ಸಾರ್ವತ್ರಿಕ ಜನಗಣತಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದ್ದು, ಈ ವರ್ಷದ ಸೆಪ್ಟಂಬರ್ ಬಳಿಕವೇ ನಡೆಯುವ ನಿರೀಕ್ಷೆ ಇದೆ. ಈ ಮೊದಲು ನಿಗದಿ ಪಡಿಸಿದ್ದ ವೇಳಾ ಪಟ್ಟಿಯ ಪ್ರಕಾರ 2020ರ ಏಪ್ರಿಲ್ 1ರಿಂದ ಸೆಪ್ಟಂಬರ್ 30ರ ನಡುವೆ ಮನೆ ಮನೆ ಸಮೀಕ್ಷೆ ಮತ್ತು ಜನಗಣತಿ ನಡೆಯಬೇಕಿತ್ತು. ಆದರೆ ಕೋವಿಡ್-19 ಸಾಂಕ್ರಾಮಿಕ ವ್ಯಾಪಿಸಿದ ಕಾರಣದಿಂದ ಗಣತಿ ಮುಂದೂಡಿಕೆಯಾಗಿದೆ. ರಿಜಿಸ್ಟರ್ ಜನರಲ್- ಜನಗಣತಿಯ ಆಯುಕ್ತರ ಕಚೇರಿಯಿಂದ ಎಲ್ಲಾ ರಾಜ್ಯಗಳಿಗೆ ಮಾಹಿತಿ ನೀಡಿರುವ ಪ್ರಕಾರ ಆಡಳಿತಾತ್ಮಕ ಗಡಿ ನಿಗದಿಗೆ […]