ಪಾಕ್ ಪ್ರಧಾನಿ-ರಕ್ಷಣಾ ಸಚಿವರ ನಡುವೆ ಮಾತಿನ ಚಕಮಕಿ

ಇಸ್ಲಾಮಾಬಾದ್,ಜ.14- ಸರ್ಕಾರದಿಂದ ಪಶ್ಚಿಮ ಖೈಬರ್ ಪಖ್ತಾನ್ವಾ ಪ್ರಾಂತ್ಯದ ಕಡೆಗಣನೆಯಾಗಿರುವುದಕ್ಕೆ ಪ್ರಧಾನಿಯ ಪರ ಮತ ನೀಡುವುದಿಲ್ಲ ಎಂದು ಹೇಳಿದ್ದಕ್ಕಾಗಿ ಪಾಕಿಸ್ತಾನದ ರಕ್ಷಣಾ ಸಚಿವ ಮತ್ತು ಪ್ರಧಾನಿಯ ನಡುವೆ ಕಾವೇರಿದ ವಾಗ್ವಾದ ನಡೆದ ಘಟನೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಪಾಕ್ ಪ್ರಧಾನಿ ಇಮ್ರಾನ್‍ಖಾನ್ ಅಧ್ಯಕ್ಷತೆಯಲ್ಲಿ ಪಾಕ್ ಸಂಸತ್ ಭವನದಲ್ಲಿ ನಿನ್ನೆ ನಡೆದ ಆಡಳಿತಾರೂಢ ಮೈತ್ರಿಕುಟದ ಸಂಸದೀಯ ಪಕ್ಷದ ಸಭೆಯಲ್ಲಿ ಈ ಘಟನೆ ಜರುಗಿದೆ ಎಂದು ದಿ ಡಾನ್ ವಾರ್ತಾಪತ್ರಿಕೆ ವರದಿ ಮಾಡಿದೆ. ಸಾಧಾರಣವಾಗಿ ಮಿನಿ ಬಜೆಟ್ ಎಮದು ಕರೆಯಲಾಗುವ ವಿವಾದಿತ ಪೂರಕ […]