ಬುಲ್ಲಿ ಬಾಯಿ ಆ್ಯಪ್ : ಡೆಹ್ರಾಡೂನ್‍ನಲ್ಲಿ 18 ವರ್ಷದ ಯುವತಿ ಬಂಧನ

ಮುಂಬೈ,ಜ.5- ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿ ಅವರು ಹರಾಜಿಗಿದ್ದಾರೆ ಎಂದು ಆಕ್ಷೇಪಾರ್ಹ ಚಿತ್ರಗಳನ್ನು ಬುಲ್ಲಿ ಬಾಯಿ ಆ್ಯಪ್‍ನಲ್ಲಿ ಅಪ್‍ಲೋಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಡೆಹ್ರಾಡೂನ್‍ನಲ್ಲಿ 18 ವರ್ಷದ ಯುವತಿಯೊಬ್ಬಳನ್ನು ಬಂಧಿಸಿದ್ದಾರೆ. ಇದು ಈ ಪ್ರಕರಣದಲ್ಲಿ 2ನ ವ್ಯಕ್ತಿಯ ಬಂಧನವಾಗಿದೆ. ಈ ಮುನ್ನ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ 21 ವರ್ಷ ವಯಸ್ಸಿನ ಎಂಜಿನಿಯರಿಂಗ್ ವಿದ್ಯಾರ್ಥಿ ವಿಶಾಲ್‍ಕುಮಾರ್ ಝಾ ಎಂಬಾತನನ್ನು ಪೊಲೀಸರು ಸೆರೆ ಹಿಡಿದರು. ಬಾಂದ್ರಾ ನ್ಯಾಯಾಲಯವು ಝಾನನ್ನು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. 18 […]