8 ವರ್ಷದ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ, ಸಿಕ್ಕಿಬಿದ್ದ ಶಿಕ್ಷಕ

ನವದೆಹಲಿ,ಫೆ.9- ಮೂರನೆ ತರಗತಿ ಓದುತ್ತಿದ್ದ ಎಂಟು ವರ್ಷದ ವಿದ್ಯಾರ್ಥಿನಿಗೆ ಶಾಲಾ ಆವರಣದಲ್ಲೇ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರನ್ನು ಪೂರ್ವ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪೂರ್ವ ದೆಹಲಿಯ ನ್ಯೂ ಅಶೋಕ್‍ನಗರದ ಸರ್ಕಾರಿ ಶಾಲೆಯಲ್ಲಿ ಕ್ರೀಡಾ ಶಿಕ್ಷಕನಾಗಿರುವ 40 ವರ್ಷದ ವ್ಯಕ್ತಿಯನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಎಂಟು ವರ್ಷದ ವಿದ್ಯಾರ್ಥಿನಿಗೆ ಚಾಕಲೇಟ್ ಆಮಿಷ ಒಡ್ಡಿದ ಶಿಕ್ಷಕ ಬಾಲಕಿಯನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ್ದ ಎನ್ನಲಾಗಿದೆ. […]