ಸುಬ್ರಹ್ಮಣ್ಯಸ್ವಾಮಿ ಮನವಿ ತಿರಸ್ಕರಿಸಿದ ಹೈಕೋರ್ಟ್

ನವದೆಹಲಿ,ಜ.6- ಏರ್ ಇಂಡಿಯಾದ ಬಂಡವಾಳ ವಾಪಸಾತಿಗೆ ತಡೆ ನೀಡಬೇಕು ಎಂದು ಬಿಜೆಪಿ ಧುರೀಣ ಡಾ.ಸುಬ್ರಹ್ಮಣಿಯನ್ ಸ್ವಾಮಿ ಅವರು ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ವಜಾ ಮಾಡಿದೆ. ಏರ್ ಇಂಡಿಯಾದ ಮೌಲ್ಯ ನಿಷ್ಕರ್ಷೆ ಮಾಡುವಲ್ಲಿ ಸರ್ಕಾರ ಅನುಸರಿಸಿರುವ ಕ್ರಮ ಏಕಪಕ್ಷೀಯ ಅಕ್ರಮವಾಗಿದೆ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಡಾ.ಸ್ವಾಮಿ ಆರೋಪಿಸಿದ್ದರು. ಮುಖ್ಯ ನ್ಯಾಯಮುರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠವು ಈ ಆದೇಶ ನೀಡಿದ್ದು,  ಸಂಪೂರ್ಣ ಆದೇಶವನ್ನು ಅಪ್‍ಲೋಡ್ ಮಾಡಲಾಗುವುದು ಎಂದು ತಿಳಿಸಿದೆ.