ದುಬೈ ಅಧಿಕಾರಿಯಂತೆ ನಟಿಸಿ ಲೀಲಾ ಪ್ಯಾಲೇಸ್‍ಗೆ ವಂಚಿಸಿದ್ದ ಆರೋಪಿ ಸೆರೆ

ನವದೆಹಲಿ,ಜ.22- ಯುನೈಟೆಡ್ ಅರಬ್ ಎಮಿರೆಟ್ಸ್ (ಯುಎಇ) ರಾಜಮನೆತನದ ಅಧಿಕಾರಿಯಂತೆ ನಟಿಸಿ ನಾಲ್ಕು ತಿಂಗಳ ಕಾಲ ದೆಹಲಿಯ ಪಂಚತಾರಾ ಹೊಟೇಲ್‍ನಲ್ಲಿ ತಂಗಿದ್ದು, 23 ಲಕ್ಷಕ್ಕೂ ಅಧಿಕ ಮೊತ್ತದ ಬಿಲ್ ಪಾವತಿಸದೆ ಪರಾರಿಯಾಗಿದ್ದ ಆರೋಪಿಯನ್ನು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಮಹಮದ್ ಶರೀಫ್ ಕಳೆದ ವರ್ಷ ಆಗಸ್ಟ್ 1 ರಂದು ನವದೆಹಲಿಯ ಲೀಲಾ ಪ್ಯಾಲೇಸ್‍ಗೆ ಆಗಮಿಸಿದ್ದು, ನಾಲ್ಕು ತಿಂಗಳ ಕಾಲ ಕೊಠಡಿ ಸಂಖ್ಯೆ 427ರಲ್ಲಿ ತಂಗಿದ್ದ. ನವೆಂಬರ್ 20ರಂದು ಕೊಠಡಿ ಖಾಲಿ ಮಾಡಿ, ಬೆಳ್ಳಿಯ ಲೋಟ, ತಟ್ಟೆ ಸೇರಿದಂತೆ […]