ಬಿಬಿಎಂಪಿ ಚುನಾವಣೆಯಲ್ಲಿ ದೆಹಲಿ ಮಾದರಿ ಜಾರಿಗೆ ಮುಂದಾದ ಬಿಜೆಪಿ

ಬೆಂಗಳೂರು,ಜ.31-ಶತಾಯ ಗತಾಯ ಈ ಬಾರಿ ಬಿಬಿಎಂಪಿಯಲ್ಲಿ ಗೆದ್ದು ಅಧಿಕಾರ ಹಿಡಿಯಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಅಮೂಲಾಗ್ರ ಬದಲಾವಣೆ ತರಲು ಮುಂದಾಗಿದೆ. ಈಗಾಗಲೇ ಒಂದು ಬಾರಿ ಮೇಯರ್, ಉಪಮೇಯರ್, ಸತತ ಮೂರು ಬಾರಿ ಗೆದ್ದವರು, ಸ್ಥಾಯಿ ಸಮಿತಿ ಅಧ್ಯಕ್ಷರಾದವರು ಹಾಗೂ ಪದೇ ಪದೇ ಅಕಾರ ಅನುಭವಿಸಿದವರಿಗೆ ಗೇಟ್ ಪಾಸ್ ನೀಡಲು ತೀರ್ಮಾನಿಸಿದೆ. ಪಕ್ಷಕ್ಕೆ ದುಡಿದವರು, ಯುವ ಮುಖಗಳು, ಮತದಾರರ ಜೊತೆ ಉತ್ತಮ ಸಂಪರ್ಕ ಹೊಂದಿದವರು, ಸಚ್ಚಾರಿತ್ರತೆ, ಉತ್ತಮ ಶಿಕ್ಷಣ, ಸಾಮಾಜಿಕ ಹಿನ್ನೆಲೆ, ಬದ್ದತೆ, ಆರ್‍ಎಸ್‍ಎಸ್ ಮತ್ತು […]