ಸಂಸತ್ ಮೇಲೆ ಕೊರೋನಾ ದಾಳಿ, 400 ಸಿಬ್ಬಂದಿಗೆ ಪಾಸಿಟಿವ್..!

ನವದೆಹಲಿ,ಜ.9- ಸುಪ್ರೀಂಕೋರ್ಟ್‍ನ ನಾಲ್ವರು ನ್ಯಾಯಮೂರ್ತಿಗಳು ಹಾಗೂ ಸಂಸತ್ ಭವನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕನಿಷ್ಠ 400 ನೌಕರರಿಗೆ ಕೋವಿಡ್‍ಸೋಂಕು ದೃಢಪಟ್ಟಿದೆ ಎಂದು ತಿಳಿದು ಬಂದಿದೆ. ಕಳೆದ ಎರಡು ದಿನಗಳಿಂದ ನಡೆದ ಕೊರೋನಾ ಪರೀಕ್ಷೆಯಲ್ಲಿ 400 ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿರುವುದು ಬೆಳಕಿಗೆ ಬಂದಿದೆ. ಅವರ ಸಂಪರ್ಕಗಳನ್ನು ಪರೀಕ್ಷಿಸಲು ಅಕಾರಿಗಳು ಸಿದ್ಧತೆ ನಡೆಸಿದ್ದಾರೆ.ಕಳೆದ ತಿಂಗಳು ಸಂಸತ್ತಿನ ಚಳಿಗಾಲದ ಅವೇಶನ ನಡೆದಿತ್ತು. ಆ ಸಭೆಗಳಿಂದಾಗಿ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಹೇಳಲಾಗುತ್ತಿದೆ.ದೆಹಲಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ 24 ಗಂಟೆಗಳಲ್ಲಿ […]