ಬೆಂಗಳೂರಿನಲ್ಲಿ ಉಲ್ಬಣಗೊಂಡ ಡೆಂಘೀ; ಕಾಡುತ್ತಿದೆ ಝೀಕಾ ಸೋಂಕಿನ ಭೀತಿ

ಬೆಂಗಳೂರು,ಡಿ.16-ರಾಜ್ಯದಲ್ಲಿ ಮೊದಲ ಝೀಕಾ ವೈರಸ್ ಪತ್ತೆಯಾದ ಬೆನ್ನಲ್ಲೇ ಬೆಂಗಳೂರಲ್ಲಿ ಡೆಂಘೀ ಸೋಂಕು ಉಲ್ಬಣಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಝೀಕಾ ವೈರಸ್ ಸೋಂಕಿನ ಲಕ್ಷಣಗಳೂ ಡೆಂಘೀ ಮಾದರಿಯಲ್ಲೇ ಇರುವುದರಿಂದ ನಗರಕ್ಕೂ ಝೀಕಾ ಸೋಂಕು ಕಾಲಿಡಬಹುದು ಎಂಬ ಆತಂಕದಿಂದ ಬಿಬಿಎಂಪಿ ಅರೋಗ್ಯಾಧಿಕಾರಿಗಳಿಗೆ ಟೆನ್ಷನ್ ಹೆಚ್ಚಾಗಿದೆ. ಮಾಂಡೂಸ್ ಚಂಡಮಾರುತದ ಎಫೆಕ್ಟ್‍ನಿಂದಾಗಿ ನಗರದಲ್ಲಿ ಡೆಂಘೀ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತುತ್ತಲೆ ಇದೆ. ಪ್ರತಿನಿತ್ಯ ನಗರದಲ್ಲಿ 50ಕ್ಕೂ ಹೆಚ್ಚು ಡೆಂಘೀ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ ಝೀಕಾ ಸೋಂಕು ಭೀತಿ ಹರಡುವ ಸಾಧ್ಯತೆಗಳು ಹೆಚ್ಚಾಗಿವೆ. ಡೆಂಘೀ […]