ಡ್ರಂಕ್ ಅಂಡ್ ಡ್ರೈವ್ ಪತ್ತೆಗೆ ಕೇರಳ ಪೊಲೀಸರಿಂದ ವಿಶೇಷ ಅಭಿಯಾನ

ತಿರುವನಂತಪುರಂ, ಫೆ.23-ಮದ್ಯಮಾರಾಟ ನಿಷೇಧದ ನಡುವೆಯೂ ಕೇರಳದಲ್ಲಿ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಪೊಲೀಸರು ರಾಜ್ಯಾದ್ಯಂತ ಕುಡಿದು ವಾಹನ ಚಾಲನೆ ಮಾಡುವವರನ್ನು ಪತ್ತೆ ಹಚ್ಚುವ ವಿಶೇಷ ಅಭಿಯಾನವನ್ನು ನಡೆಸಿದ್ದು 3,764 ಪ್ರಕರಣಗಳು ದಾಖಲಾಗಿದೆ. ಸಂಚಾರ ವಿಭಾಗದ ಐಜಿಪಿ ಎ ಅಕ್ಬರ್ ಸೂಚನೆಯ ಮೇರೆಗೆ ಕೇರಳದಾದ್ಯಂತ ಜಿಲ್ಲಾ ಪೊಲೀಸ್ ಮುಖ್ಯಸ್ಥರ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಕಳೆದ ಫೆ.6ರಿಂದ ಫೆ.12ರವರೆಗೆ 3,764 ಪ್ರಕರಣಗಳು ದಾಖಲಾಗಿದ್ದು, 1,911 ಲೈಸೆನ್ಸ್ ರದ್ದುಪಡಿಸಲಾಗಿದ್ದು, ಕುಡಿದು ವಾಹನ ಚಾಲನೆ ಮಾಡಿದ್ದಕ್ಕಾಗಿ 894 ಪರವಾನಗಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು […]