ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದ 30 ಸಾವಿರ ಪಾದಯಾತ್ರಿಗಳು

ಬೆಳ್ತಂಗಡಿ, ಮಾ.1- ಶಿವರಾತ್ರಿ ಹಬ್ಬದಂದು ಧರ್ಮಸ್ಥಳ ಪುಣ್ಯಕ್ಷೇತ್ರಕ್ಕೆ 30 ಸಾವಿರಕ್ಕೂ ಹೆಚ್ಚು ಪಾದಯಾತ್ರಿಗಳು ಭೇಟಿ ನೀಡಿ ದೇವರ ದರ್ಶನ ಪಡೆದು ಪುನೀತರಾದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಪಾದಯಾತ್ರಿಗಳು ಚಾರ್ಮಾಡಿ, ಮುಂಡಾಜೆ, ಉಜಿರೆ ಮೂಲಕ ಇಂದು ಮುಂಜಾನೆ ಧರ್ಮಸ್ಥಳ ತಲುಪಿದರು. ಸನ್ನಿಗೆ ಆಗಮಿಸಿದ ಪಾದಯಾತ್ರಿಗಳಿಗಾಗಿ ಧರ್ಮಸ್ಥಳದ ಮುಖ್ಯ ಪ್ರವೇಶದ್ವಾರದ ಬಳಿ ವಿಶೇಷ ಕಾರ್ಯಾಲಯ ತೆರೆಯಲಾಗಿತ್ತು. ದೇವರ ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಉಚಿತ ಪಾನೀಯ ನೀಡಿ ಬೇಕಾದ ಮಾಹಿತಿ ಮಾರ್ಗದರ್ಶನ ನೀಡಲಾಯಿತು. ಸಾಕೇತ ಮತ್ತು ಗಂಗೋತ್ರಿ ವಸತಿ […]