ಎಂಗೇಜ್ಮೆಂಟ್ ಪಾರ್ಟಿ : ಕುಡಿದ ಮತ್ತಲ್ಲಿ 5ನೇ ಮಹಡಿಯಿಂದ ಬಿದ್ದು ಯುವಕ ಸಾವು

ಬೆಂಗಳೂರು, ಫೆ.16- ಮದುವೆ ನಿಶ್ಚಿಯವಾಗಿದ್ದ ಸ್ನೇಹಿತನ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದಾಗ ಆಯಾ ತಪ್ಪಿ ಕಟ್ಟಡದ 5ನೇ ಮಹಡಿಯಿಂದ ಬಿದ್ದು, ಇವೆಂಟ್ ಮ್ಯಾನೇಜ್ಮೆಂಟ್ ಮಾಡುತ್ತಿದ್ದ ಗೆಳೆಯ ಮೃತಪಟ್ಟಿರುವ ಘಟನೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದೆ. ಲಗ್ಗೆರೆ ನಿವಾಸಿ ಗೌತಮ್(27) ಮೃತಪಟ್ಟ ಯುವಕ. ಈತ ಮದುವೆ, ಹುಟ್ಟುಹಬ್ಬ ಇನ್ನಿತರ ಸಭೆ ಸಮಾರಂಭಗಳಿಗೆ ಇವೆಂಟ್ ಮ್ಯಾನೇಜ್ಮೆಂಟ್ ಮಾಡುತ್ತಿದ್ದನು. ಮಡಿವಾಳದ ಟೀಚರ್ಸ್ ಕಾಲೋನಿಯ 1ನೇ ಮುಖ್ಯರಸ್ತೆಯ ಲಕ್ಷ್ಮೀ ನಿಲಯದ 5ನೇ ಮಹಡಿಯಲ್ಲಿ ವಾಸವಾಗಿರುವ ಮೂಲತಃ ಆಂಧ್ರಪ್ರದೇಶದ ಪ್ರದೀಪ್ […]

ಅಜ್ಜಿ ಚಪ್ಪಲಿ ಕೊಡಿಸಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಮೊಮ್ಮಗ

ಔರಂಗಾಬಾದ್,ಫೆ.14- ಅಜ್ಜಿ ಹೊಸ ಚಪ್ಪಲಿ ಕೊಡಿಸಲಿಲ್ಲ ಎಂದು 10 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ 10 ವರ್ಷದ ಬಾಲಕ ತನ್ನ ಅಜ್ಜಿ ಹೊಸ ಪಾದರಕ್ಷೆಗಳನ್ನು ಖರೀದಿಸಲು ನಿರಾಕರಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಕ್ಕದ ಹಳ್ಳಿಯ ದಂಪತಿ ಮಗು ತನ್ನ ಅಜ್ಜಿಯೊಂದಿಗೆ ವಾಸಿಸುತಿತ್ತು. ಹೊರಗಡೆ ಹೋಗಿದ್ದಾಗ ಮಗು ಹೊಸ ಜೋಡಿ ಚಪ್ಪಲಿಗಳನ್ನು ಕೇಳಿದನು ಆದರೆ ಅವನ ಬೇಡಿಕೆಗೆ ಅವನ ಅಜ್ಜಿ ಒಪ್ಪಲಿಲ್ಲ. ಇದರಿಂದ ಮನನೊಂದ ಮಗು ಮನೆಗೆ […]

ಹೃದಯಘಾತದಿಂದ ಸಂಸದ ಸಾವು, ಭಾರತ್ ಜೋಡೋ ಯಾತ್ರೆ ಸ್ಥಗಿತ

ಲೂಯಾನ,ಜ.14-ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಕಾಂಗ್ರೆಸ ಸಂಸದರೊಬ್ಬರು ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. 76 ವರ್ಷ ವಯಸ್ಸಿನ ಜಲಂಧರ್ ಸಂಸದ ಸಂತೋಖ್ ಸಿಂಗ್ ಚೌಧರಿ ಅವರು ಹೃದಯಘಾತದಿಂದ ನಿಧನರಾದವರು.ಪಂಜಾಬ್‍ನ ಫಿಲ್ಲೌರ್ ನಲ್ಲಿ ಪಾದಯಾತ್ರೆಯಲ್ಲಿ ಸಾಗುತ್ತಿದ್ದ ಅವರು ಇದ್ದಕ್ಕಿದ್ದ ಹಾಗೆ ಕುಸಿದುಬಿದ್ದರು. ತಕ್ಷಣ ಅವರನ್ನು ಫಗ್ವಾರಾದಲ್ಲಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಮದ್ಯ ಖರೀದಿ ವಯೋಮಿತಿ 21ರಿಂದ 18ಕ್ಕಿಳಿಸಲು ಮುಂದಾದ ಸರ್ಕಾರ ಸಂಸದರು ಕುಸಿದು ಬೀಳುತ್ತಿದ್ದಂತೆ ರಾಹುಲ್ ಗಾಂಧಿ ಅವರು ಯಾತ್ರೆ ಸ್ಥಗಿತಗೊಳಿಸಿ ಆಸ್ಪತ್ರೆಗೆ […]

ಚಾಕೊಲೇಟ್ ತಿಂದ 9 ವರ್ಷದ ಬಾಲಕ ಉಸಿರುಗಟ್ಟಿ ಸಾವು

ಹೈದರಾಬಾದ್,ನ.28- ಶಾಲೆಯಲ್ಲಿ ಚಾಕೊಲೇಟ್ ತಿಂದ 9 ವರ್ಷದ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ವಾರಂಗಲ್‍ನಲ್ಲಿ ನಡೆದಿದೆ.ಮೃತನನ್ನು ಸಂದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ನಗರದ ಶಾರದಾ ಪ್ರೌಢಶಾಲೆಯ ಎರಡನೇ ತರಗತಿಯಲ್ಲಿ ಓದುತ್ತಿದ್ದ ಸಂದೀಪ್ ಸಿಂಗ್ ಶಾಲೆಗೆ ಪ್ರತಿ ದಿನ ಚಾಕಲೇಟ್ ಒಯ್ಯುವುದು ಅಭ್ಯಾಸವಾಗಿತ್ತು. ಅದೇ ರೀತಿ ಕಳೆದ ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಚಾಕಲೇಟ್ ತಿನ್ನುತ್ತಿದ್ದ ಬಾಲಕ ಉಸಿರುಗಟ್ಟಿಕೊಂಡಿದ್ದಾನೆ. ಕೂಡಲೆ ಎಚ್ಚೆತ್ತ ಶಿಕ್ಷಕರು ಗಂಟಲಿಗೆ ಸಿಕ್ಕಿಕೊಂಡಿದ ಚಾಕಲೇಟ್ ತೆಗೆಯಲು ಪ್ರಯತ್ನಿಸಿ ನಂತರ ವಾರಂಗಲ್‍ನ ಎಂಜಿಎಂ ಆಸ್ಪತ್ರೆಗೆ ದಾಖಲಿಸಿದ್ದಾರೆ […]