ಚಿನ್ನದ ಪದಕ ಗೆದ್ದ ಕ್ರೀಡಾಪಟು ಹಾಗೂ ನಟ ಪ್ರವೀಣ್ ಕುಮಾರ್ ಸೋಬ್ತಿ ನಿಧನ

ಹೊಸದಿಲ್ಲಿ, ಫೆ 8- ಅಥ್ಲೆಟಿಕ್‍ನಲ್ಲಿ ಪ್ರಸಿದ್ಧ ಕ್ರೀಡಾಪಟುವಾಗಿ ಏಷ್ಯನ್ ಗೇಮ್ಸ ಚಿನ್ನದ ಪದಕ ಗೆದ್ದು ಬಣ್ಣದ ಲೋಕದಲ್ಲಿ ಮಿಂಚಿದ್ದ ನಟ ಪ್ರವೀಣ್ ಕುಮಾರ್ ಸೋಬ್ತಿ(74) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ನಿನ್ನೆ ಸಂಜೆ ಎದೆ ನೋವು ಕಾಣಿಸಿಕೊಂಡಿದೆ.ನಂತರ ವೈದ್ಯರನ್ನು ಮನೆಗೆ ಕರೆಸಿ ಚಿಕಿತ್ಸೆ ನೀಡಲಾಯಿತು ಆದರೆ ರಾತ್ರಿ 10.30 ರಲ್ಲಿ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ ಎಂದು ಸಂಬಂಧಿಯೊಬ್ಬರು ತಿಳಿಸಿದ್ದಾರೆ. ಪ್ರವೀಣ್ ಡಿಸ್ಕಸ್ ಥ್ರೋ ಸೇರಿದಂತೆ ಅಥ್ಲೆಟಿಕ್ ಕ್ರೀಡೆಯಲ್ಲಿ ಅಂತರಾಷ್ಟೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಸಿದರು. 1966 […]