ಮೋದಿಗಾಗಿ ಬಿಡೆನ್ ಭೋಜನಕೂಟ

ನವದೆಹಲಿ,ಮಾ.18- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗಾಗಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರು ಶೀಘ್ರದಲ್ಲೇ ಭೋಜನ ಕೂಟ ಆಯೋಜಿಸಲಿದ್ದಾರೆ ಎಂದು ತಿಳಿದುಬಂದಿದೆ. ಭಾರತದೊಂದಿಗೆ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲು ನಿರ್ಧರಿಸಿರುವ ಬಿಡೆನ್ ಅವರು ಮೋದಿ ಅವರಿಗಾಗಿ ಭೋಜನ ಕೂಟ ಆಯೋಜಿಸುವ ಮೂಲಕ ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯದ ಬಗ್ಗೆ ಜಗತ್ತಿನ ಗಮನ ಸೆಳೆಯಲು ಮುಂದಾಗಿದ್ದಾರೆ ಎನ್ನಲಾಗಿದೆ. ಶ್ವೇತಭವನವು ಜೂನ್‍ನಲ್ಲಿ ಭೋಜನ ಕೂಟ ಆಯೋಜಿಸಲು ನಿರ್ಧರಿಸಿದೆ ಆದರೆ, ಇನ್ನು ದಿನಾಂಕ ಗೊತ್ತುಪಡಿಸಿಲ್ಲ ಎಂದು ಮೂಲಗಳು ಉಲ್ಲೇಖಿಸಿವೆ. ಸಿಬಿಐ, ಇಡಿ […]