ರೈಲ್ವೆಯಲ್ಲಿ 2019ರಿಂದಲೂ ಈವರೆಗೆ ಯಾವುದೇ ಜೀವಹಾನಿ ಆಗಿಲ್ಲ

ನವದೆಹಲಿ,ಜ.2- ಭಾರತೀಯ ರೈಲ್ವೆ ಇಲಾಖೆಯಲ್ಲಿ ಹಲವಾರು ಮೈಲುಗಲ್ಲುಗಳ ಸಾಧನೆಯಾಗಿದ್ದು, ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ 2019ರಿಂದಲೂ ಈವರೆಗೆ ಯಾವುದೇ ಜೀವಹಾನಿ ಆಗಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 2019-20ನೇ ಸಾಲಿನಲ್ಲಿ 48 ಅಪಘಾತಗಳಾಗಿದ್ದವು. ಆನಂತರ 2020-21ರಲ್ಲಿ 22 ಅಪಘಾತಗಳಾಗಿದ್ದರೂ ಕೂಡ ಯಾವುದೇ ಜೀವಹಾನಿಯಾಗಿಲ್ಲ ಎಂದು ತಿಳಿಸಲಾಗಿದೆ. ಸರಕು ಸಾಗಾಣಿಕೆಯಲ್ಲಿ ರೈಲ್ವೆ ಇಲಾಖೆ ಶೇ.18ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. 2020-21ರಲ್ಲಿ 870.41 ಮೆಟ್ರಿಕ್ ಟನ್ ಸರಕು ಸಾಗಾಣಿಕೆ ಮಾಡಿದ್ದರೆ, 2021-22ನೇ ಸಾಲಿಗೆ 1029.94 ಮೆಟ್ರಿಕ್ ಟನ್ ಸರಕು ಸಾಗಾಣಿಕೆಯಾಗಿದೆ. […]