ಸ್ಯಾಂಡಲ್‍ವುಡ್‍ನ ಖ್ಯಾತ ನಿರ್ದೇಶಕ ಪ್ರದೀಪ್ ರಾಜ್ ವಿಧಿವಶ

ಬೆಂಗಳೂರು, ಜ. 20- ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ ಚಿತ್ರದ ನಿರ್ದೇಶಕ ಪ್ರದೀಪ್ ರಾಜ್ ಅವರು ಇಂದು ಬೆಳಗ್ಗೆ 3 ಗಂಟೆ ಸುಮಾರಿನಲ್ಲಿ ಪಾಂಡಿಚೇರಿಯಲ್ಲಿ ನಿಧನರಾಗಿದ್ದಾರೆ. ಮಧುಮೇಹದಿಂದ ಬಳಲುತ್ತಿದ್ದ ಪ್ರದೀಪ್ ರಾಜ್ ಕಳೆದ ವರ್ಷ ಕೊರೊನಾ ಸೋಂಕಿಗೂ ಒಳಗಾಗಿದ್ದ ಪ್ರದೀಪ್ ರಾಜ್ (46) ನಿಧನಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಸೇರಿದಂತೆ ಚಿತ್ರರಂಗದ ಹಲವು ಕಲಾವಿದರು, ತಂತ್ರಜ್ಞರು ಸಂತಾಪ ಸೂಚಿಸಿದ್ದಾರೆ. ತಮ್ಮ ಚಿತ್ರಗಳಲ್ಲಿ ಹಳ್ಳಿ ಗಾಡಿನ ಸೊಗಡನ್ನು ಹೆಚ್ಚಾಗಿ […]