ಅಹಿಂಸೆ, ಮಾತುಕತೆಯೇ ಸಂಘರ್ಷಕ್ಕೆ ಪರಿಹಾರ : ದಲೈಲಾಮ

ಧರ್ಮಶಾಲಾ, ಫೆ28- ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಸೋಮವಾರ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಕಳವಳ ವ್ಯಕ್ತಪಡಿಸಿದ್ದು, ಸಮಸ್ಯೆಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಉತ್ತಮವಾಗಿ ಪರಿಹರಿಸಲು ಸಾಧ್ಯವಿದೆ ಎಂದು ಹೇಳಿದ್ದಾರೆ. ಉಕ್ರೇನ್-ರಷ್ಯಾ ಸಂಘರ್ಷದಿಂದ ನಾನು ತೀವ್ರವಾಗಿ ದುಃಖಿತನಾಗಿದ್ದೇನೆ ಎಂದಿರುವ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ದಲೈಲಾಮಾ, ನಮ್ಮ ಪ್ರಪಂಚವು ಪರಸ್ಪರ ಅವಲಂಬಿತವಾಗಿದೆ, ಎರಡು ದೇಶಗಳ ನಡುವಿನ ಹಿಂಸಾತ್ಮಕ ಸಂಘರ್ಷವು ಅನಿವಾರ್ಯವಾಗಿ ಉಳಿದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಯುದ್ಧವು ಹಳೆಯದು – ಅಹಿಂಸೆ ಒಂದೇ ದಾರಿ […]