ಭ್ರಷ್ಟಾಚಾರದ ಬಗ್ಗೆ ಚರ್ಚಿಸಲು ಪ್ರತಿಪಕ್ಷ ಪಟ್ಟು, ಸದನದಲ್ಲಿ ವಾಕ್ಸಮರ

ಬೆಳಗಾವಿ,ಡಿ.26-ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ನಿಯಮ 69ರಡಿ ಚರ್ಚಿಸಲು ಅವಕಾಶ ನೀಡಬೇಕೆಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪಟ್ಟು ಹಿಡಿದ ಕಾರಣ ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಭಾರೀ ವಾಕ್ ಸಮರ ನಡೆಯಿತು. ಗಮನಸೆಳೆಯುವ ಸೂಚನೆಗಳು ಮುಗಿದ ನಂತರ ಸಿದ್ದರಾಮಯ್ಯನವರು ಪ್ರಸ್ತಾಪಿಸಿದ ವಿಷಯವನ್ನು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕೈಗೆತ್ತಿಕೊಂಡರು. ಇದು ನಿಯಮ 69ರಡಿ ಚರ್ಚಿಸಲು ಬರುವುದಿಲ್ಲ. ಇದನ್ನು ಬೇರೊಂದು ನಿಯಮದಡಿ ಚರ್ಚಿಸಲು ಅವಕಾಶ ಕೊಡುತ್ತೇನೆ ಎಂದು ಹೇಳಿದರು. ಆಗ ಆಕ್ಷೇಪಿಸಿದ ಸಿದ್ದರಾಮಯ್ಯನವರು, ಇದು ಅತ್ಯಂತ […]