ಚೀನಾ ಲಿಖಿತ ಒಪ್ಪಂದಗಳನ್ನು ನಿರ್ಲಕ್ಷಿಸಿದ್ದರಿಂದ ಗಡಿಯಲ್ಲಿ ಬಿಗುವಿನ ಸ್ಥಿತಿ : ಜೈಶಂಕರ್

ಮೆಲ್ಬೋರ್ನï, ಫೆ 12 ಗಡಿಯಲ್ಲಿ ಹೆಚ್ಚಿನ ಸೈನಿಕರನ್ನು ನಿಯೋಜಿಸದಂತೆ ಅಗಿದ್ದ ಲಿಖಿತ ಒಪ್ಪಂದಗಳನ್ನುಚೀನಾ ನಿರ್ಲಕ್ಷಿಸಿರುವುದರಿಂದ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಬಿಗುವಿನ ಪರಿಸ್ಥಿತಿ ಉದ್ಭವಿಸಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಮರಿಸ್ ಪೇನ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೈಶಂಕರ್, ದೊಡ್ಡ ದೇಶವು ಬದ್ಧತೆಗಳನ್ನು ಕಡೆಗಣಿಸಿದೆ ಅದು ಇಡೀ ಅಂತರರಾಷ್ಟ್ರೀಯ ಸಮುದಾಯಕ್ಕೆ ಕಾನೂನುಬದ್ಧ ಕಾಳಜಿಯ ವಿಷಯವಾಗಿದೆ ಎಂದರು ಕ್ವಾಡ ಸಚಿವರ ಸಭೆಯಲ್ಲಿ ಭಾರತ-ಚೀನಾ ಸಂಬಂಧಗಳ ಬಗ್ಗೆ ಚರ್ಚೆ ನಡೆಸಿದ್ದೇವೆ ಏಕೆಂದರೆ ಇದು […]