ಇಬ್ಬರು ಸಚಿವರ ಜಿಲ್ಲಾ ಉಸ್ತುವಾರಿ ಬದಲಿಸಿ ಸರ್ಕಾರ ಆದೇಶ

ಬೆಂಗಳೂರು,ಜು.30- ರಾಜ್ಯ ಸರ್ಕಾರ ಇಬ್ಬರು ಸಚಿವರ ಜಿಲ್ಲಾ ಉಸ್ತುವಾರಿಯನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರಿಗೆ ತವರು ಜಿಲ್ಲೆ ವಿಜಯನಗರ ಹಾಗೂ ವಕ್ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಕೊಪ್ಪಳ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ. ಈ ಹಿಂದೆ ಹಲವು ಸಚಿವರ ಜಿಲ್ಲಾ ಉಸ್ತುವಾರಿಯನ್ನು ಬದಲಾವಣೆ ಮಾಡಲಾಗಿತ್ತು. ಆನಂದ್ ಸಿಂಗ್ ಅವರು ತಮಗೆ ತವರು ಜಿಲ್ಲೆಯ ಉಸ್ತುವಾರಿ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು. ಅವರ ಮನವಿ ಮೇರೆಗೆ ವಿಜಯನಗರ ಜಿಲ್ಲೆಯ ಉಸ್ತುವಾರಿಯನ್ನು ನೀಡಲಾಗಿದೆ.

ಉಸ್ತುವಾರಿ ಸಚಿವರ ನೇಮಕ, ಒಳಗೊಳಗೆ ಕೊತಕೊತ ಕುದಿಯುತ್ತಿದ್ದಾರೆ ಕೆಲವರು

ಬೆಂಗಳೂರು,ಜ.25- ಸಾಕಷ್ಟು ಅಳೆದು ತೂಗಿ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗಿದ್ದರೂ ತವರು ಜಿಲ್ಲೆ ಕೈ ತಪ್ಪಿರುವುದರಿಂದ ಅನೇಕ ಸಚಿವರು ಒಳಗೊಳಗೆ ಕೊತಕೊತ ಕುದಿಯುತ್ತಿದ್ದಾರೆ. ಬಹಿರಂಗವಾಗಿ ಅಸಮಾಧಾನ ಹೇಳಿಕೊಳ್ಳಲು ಆಗದೆ, ಕೊಟ್ಟಿರುವ ಜಿಲ್ಲೆಯ ಉಸ್ತುವಾರಿಯನ್ನು ವಹಿಸಿಕೊಳ್ಳಲು ಆಗದ ಅನೇಕ ಸಚಿವರು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಯಾರು ನಿರೀಕ್ಷೆ ಮಾಡದ ರೀತಿಯಲ್ಲಿ ಸಿಎಂ ಬೊಮ್ಮಾಯಿ ಅವರು ತವರು ಜಿಲ್ಲೆಯನ್ನು ಬದಲಾಯಿಸಿ ಬೇರೊಂದು ಜಿಲ್ಲೆಯ ಉಸ್ತುವಾರಿ ನೀಡಿರುವುದಕ್ಕೆ ಎದ್ದಿರುವ ಅಸಮಾಧಾನ ಶಮನವಾಗುವ ಲಕ್ಷಣಗಳು ಕಂಡುಬರುತ್ತಿಲ್ಲ. # ಎಚ್ಚರಿಕೆ ಹೆಜ್ಜೆ: ಈಗ […]

ಉಸ್ತುವಾರಿ ಹಂಚಿಕೆಯಲ್ಲಿ ಹೊಸ ಪದ್ದತಿ ತರಲಾಗಿದೆ : ಅಶ್ವಥ್ ನಾರಾಯಣ

ಬೆಂಗಳೂರು,ಜ.25- ಜಿಲ್ಲಾ ಉಸ್ತುವಾರಿ ಹಂಚಿಕೆ ವಿಚಾರದಲ್ಲಿ ನಮ್ಮ ಸರ್ಕಾರದಲ್ಲಿ ಹೊಸ ಪದ್ಧತಿ ತರಲಾಗಿದೆ ಎಂದು ಉನ್ನತ ಶಿಕ್ಷಣ ಮತ್ತು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್.ಅಶ್ವಥ್ ನಾರಾಯಣ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರ ತವರು ಜಿಲ್ಲೆಯಾದರೆ ಅವರದ್ದೇ ಯೋಚನೆ, ಗುಂಪು, ಲೈಕ್ಸ್, ಡಿಸ್ ಲೈಕ್ಸ್, ದೂರುಗಳು ಇದ್ದೇ ಇರುತ್ತದೆ. ತಟಸ್ಥ(ನ್ಯೂಟ್ರಲ್) ವ್ಯಕ್ತಿ ಬೇಕು ಎಂಬ ಕಾರಣಕ್ಕೆ ಬೇರೆ ಜಿಲ್ಲೆಗಳನ್ನು ಕೊಡಲಾಗಿದೆ ಎಂದು ಸಮರ್ಥಿಸಿಕೊಂಡರು. ರಾಮನಗರ ಜಿಲ್ಲೆ ಉಸ್ತುವಾರಿ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿರಲಿಲ್ಲ. ಇದುವರೆಗೂ […]