ಕಾಸರಗೂಡಿನಲ್ಲಿ ಬೀಡಿ ಕಟ್ಟುತ್ತಿದ್ದ ವ್ಯಕ್ತಿ ಇಂದು ಟೆಕ್ಸಾಸ್ ಜಿಲ್ಲಾ ನ್ಯಾಯಾಧೀಶ..!

ಟೆಕ್ಸಾಸ್,ಜ.8- ಅಮೆರಿಕಾದ ಟೆಕ್ಸಾಸ್ ಜಿಲ್ಲಾ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿರುವ ಭಾರತೀಯ ಮೂಲದ ಸುರೇಂದ್ರನ್ ಕೆ ಪಟೇಲ್ ಅವರು ನನ್ನ ಈ ಸಾಧನೆಗೆ ಬಾಲ್ಯದ ಕಷ್ಟದ ಜೀವನವೇ ಕಾರಣ ಎನ್ನುವುದನ್ನು ಸ್ಮರಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಟೆಕ್ಸಾಸ್‍ನಲ್ಲಿ ಜಿಲ್ಲಾ ನ್ಯಾಯಾೀಧಿಶರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೇರಳದ ಕಾಸರಗೂಡು ಮೂಲದ 51 ವರ್ಷದ ಸುರೇಂದ್ರನ್ ಕೆ ಪಟೇಲ್ ಅವರು ಬಾಲ್ಯದಲ್ಲಿ ತಾವು ಬೀಡಿ ಕಟ್ಟುವ ದಿನಗಳು ಮತ್ತು ಮನೆಗೆಲಸಗಾರರಾಗಿ ಕೆಲಸ ಮಾಡಿದ್ದು ಯುನೈಟೆಡ್ ಸ್ಟೇಟ್ಸ್‍ನಲ್ಲಿ ಯಶಸ್ಸನ್ನು ಸಾಧಿಸಲು ಸಹಾಯವಾಯಿತು ಎಂದು ಹೇಳಿಕೊಂಡಿದ್ದಾರೆ. ಕೇರಳದ ಕಾಸರಗೋಡಿನಲ್ಲಿ […]