ವಿಚ್ಛೇತ ಮಹಿಳೆಯೊಂದಿಗೆ ಪ್ರೀತಿ ನಾಟಕವಾಡಿ ವಂಚನೆ

ಬೆಂಗಳೂರು,ಫೆ.7-ವಿಚ್ಛೇತ ಮಹಿಳೆಯನ್ನು ಪುಸಲಾಯಿಸಿ ಪ್ರೀತಿಸುವ ನಾಟಕವಾಡಿ ಆಕೆಯೊಂದಿಗೆ ಸಂಪರ್ಕ ಬೆಳೆಸಿ ಕೊಂಡು ಮೋಸ ಮಾಡಿರುವ ವ್ಯಕ್ತಿ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಂದಿರಾನಗರದ 30 ವರ್ಷದ ನೊಂದ ಮಹಿಳೆ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕೌಟುಂಬಿಕ ಕಲಹದಿಂದಾಗಿ ಪತಿಗೆ ವಿಚ್ಛೇಧನ ನೀಡಿದ್ದ ಮಹಿಳೆ ಇಬ್ಬರು, ಮಕ್ಕಳೊಂದಿಗೆ ಇಂದಿರಾನಗರದಲ್ಲಿ ಪ್ರತ್ಯೇಕ ವಾಸವಾಗಿದ್ದಾರೆ. ಜೀವನ ನಿರ್ವಹಣೆಗಾಗಿ ಆ ಮಹಿಳೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅದೇ ಕಂಪನಿಯಲ್ಲಿ ಕೆಲಸ […]