ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಶಕ್ತಿ ಪ್ರದರ್ಶನ

ಬೆಂಗಳೂರು, ಜ.11- ಕನಕಪುರದಲ್ಲಿಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಶಕ್ತಿ ಪ್ರದರ್ಶನವಾಯಿತು. ನಿನ್ನೆ ಸಂಜೆ ಕನಕಪುರಕ್ಕೆ ತಲುಪಿದ ಪಾದಯಾತ್ರೆ ಇಂದು ಮತ್ತೆ ಬೆಳಗ್ಗೆ ಆರಂಭವಾಯಿತು. ಮೂರನೇ ದಿನದಲ್ಲಿ ಕನಕಪುರ ಮುಖ್ಯರಸ್ತೆಯ ತುಂಬೆಲ್ಲಾ ಜನಸಾಗರ ತುಂಬಿ ತುಳುಕುತ್ತಿತ್ತು. ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ರೋಡ್ ಶೋನಲ್ಲಿ ಭಾಗವಹಿಸಿದ್ದರು. ವಾಹನ ಹತ್ತಿ ನಿಂತ ಇಬ್ಬರು ನಾಯಕರ ಮೇಲೆ ಕಾರ್ಯಕರ್ತರು ಪುಷ್ಪವೃಷ್ಠಿಗರೆದರು. ಭಾರೀ ಗಾತ್ರದ ಸೇಬಿನ ಹಾರ ಮತ್ತು ಹೂವಿನ ಹಾರ ಹಾಕಲಾಯಿತು. ಸುಮಾರು 25 […]