ಹರ್ಷ ಹಂತಕರ ವಿರುದ್ಧ ಸರ್ಕಾರ ಉಗ್ರ ಕ್ರಮ ಕೈಗೊಳ್ಳಲಿ : ಡಿಕೆಶಿ
ಬೆಂಗಳೂರು.ಫೆ.21-ಶಿವಮೊಗ್ಗದಲ್ಲಿ ಯುವಕ ಹರ್ಷ ಹಂತಕರ ವಿರುದ್ಧ ಸರ್ಕಾರ ಉಗ್ರ ಕ್ರಮ ಕೈಗೊಳ್ಳಿ ಎಂದುಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.ಸ್ದುಗಾರರ ಜೊತೆ ಮಾತನಾಡಿದ ಡಿಕೆ ಶಿವಕುಮಾರ್, ಭದ್ರಾವತಿ ಶಾಸಕ ಸಂಗಮೇಶ್ ಅವರಿಂದ ಮಾಹಿತಿ ಪಡೀತಿದ್ದೇನೆ . ಪ್ರಕರಣ ಸಂಬಂಧ ಸೂಕ್ತವಾದ ತನಿಖೆ ಆಗಬೇಕು , ಯಾವುದೇ ಕಾರಣಕ್ಕೂ ತಪ್ಪಿತಸ್ಥರ ರಕ್ಷಣೆ ಆಗಬಾರದು . ಶಿವಮೊಗ್ಗದಲ್ಲಿ ಶಾಂತಿ ಕಾಪಾಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದರು. ಈ ವಿಚಾರವನ್ನು ಬೇರೆಯವರು ದುರುಪಯೋಗಪಡಿಸಿಕೊಳ್ಳಬಾರದು. ಕುವೆಂಪು ಅವರ ಶಾಂತಿಯ ತೋಟದಲ್ಲಿ ಇದೆಲ್ಲಾ ಆಗಬಾರದು […]