ದಾಖಲೆಗಳ ಡಿಜಟಲೀಕರಣಕ್ಕೆ 15 ಕೋಟಿ ರೂ. ಅನುದಾನ

ಬೆಂಗಳೂರು,ಮಾ.4- ಪಾರಂಪರಿಕ ನೋಂದಾಯಿತ ಶಾಶ್ವತ ದಾಖಲೆಗಳನ್ನು ತಿರುಚುವುದನ್ನು ತಪ್ಪಿಸುವ ಸಲುವಾಗಿ ಸ್ಕ್ಯಾನಿಂಗ್ ಮೂಲಕ ಡಿಜಟಲೀಕರಣಗೊಳಿಸಲು 15 ಕೋಟಿ ರೂ.ಗಳನ್ನು ನಿಗದಿ ಮಾಡಲಾಗಿದೆ. ಮೊದಲ ಹಂತದಲ್ಲಿ ಬಿಬಿಎಂಪಿ ಹಾಗೂ ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿರುವ ದಾಖಲಾತಿಗಳನ್ನು ಹಂತ ಹಂತವಾಗಿ ಸ್ಕ್ಯಾನ್ ಮಾಡಲಾಗುವುದು. ಇದರಿಂದ ದಾಖಲಾತಿಗಳನ್ನು ನಕಲು ಮಾಡಿ ಮೋಸ ಮಾಡುವುದನ್ನು ತಡೆಯಲು ಸಾಧ್ಯವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ರಾಜ್ಯಾದ್ಯಂತ ಈಗಾಗಲೇ ಆರಂಭಗೊಂಡಿರುವ ಡ್ರೋಣ್ ಆಧಾರಿತ ಸ್ವತ್ತುಗಳ ಸರ್ವೇ ಕಾರ್ಯಕ್ಕೆ 287 ಕೋಟಿ […]