ಬಿಬಿಸಿ ಸಾಕ್ಷ್ಯ ಚಿತ್ರ ನಿಷೇಧ ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ

ನವದೆಹಲಿ,ಜ.30-ಪ್ರಧಾನಿ ನರೇಂದ್ರ ಮೋದಿ ಮತ್ತು 2002ರ ಗುಜರಾತ್ ಗಲಭೆ ಕುರಿತು ಬ್ರಿಟಿಷ್ ಸುದ್ದಿಸಂಸ್ಥೆ ಬಿಬಿಸಿ ನಿರ್ಮಿಸಿದ್ದ ಸಾಕ್ಷ್ಯಚಿತ್ರ ನಿಧಿಷೇಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರಿಂಕೋರ್ಟ್ ಸಮ್ಮತಿಸಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ, e. ಬಿ.ಪರ್ದಿವಾಲಾ ಅವರನ್ನೊಳಗೊಂಡ ಪೀಠವು ವಕೀಲ ಎಂ.ಎಲ್.ಶರ್ಮಾ ಮತ್ತು ಹಿರಿಯ ವಕೀಲ ಸಿಯು ಸಿಂಗ್ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿಗಳನ್ನು ವಿಚಾರಣೆ ನಡೆಸಲು ಸಮ್ಮತಿಸಿದೆ. ಭಾರತ: ಮೋದಿ ಪ್ರಶ್ನೆ ಎಂಬ ಸಾಕ್ಷ್ಯ ಚಿತ್ರ […]

ಬೆಂಗಳೂರಿನಲ್ಲೂ ಬಿಬಿಸಿ ವಿವಾದಾತ್ಮಕ ಸಾಕ್ಷ್ಯಚಿತ್ರದ ಪ್ರಸಾರ

ಬೆಂಗಳೂರು,ಜ.30- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತು ಬಿಬಿಸಿ ಸಿದ್ಧಪಡಿಸಿರುವ ವಿವಾದಾತ್ಮಕ ಸಾಕ್ಷ್ಯಚಿತ್ರದ ಪ್ರಸಾರದ ಮೇಲೆ ಕೇಂದ್ರ ಸರಕಾರ ನಿರ್ಬಂಧ ವಿಧಿಸಿದ್ದರೂ ಕೂಡ ಬೆಂಗಳೂರಿನಲ್ಲಿ ಸಾಕ್ಷ್ಯಚಿತ್ರವನ್ನು ಪ್ರದರ್ಶನ ಮಾಡಿರುವುದು ಕಂಡು ಬಂದಿದೆ. ಬೆಂಗಳೂರಿನ ಇನೆಂಟ್ರಿ ರಸ್ತೆಯಲ್ಲಿರುವ ಅಖಿಲ ಭಾರತ ವಿದ್ಯಾರ್ಥಿಗಳ ಸಂಘದ (ಎಐಎಸ್‍ಎ) ಕಚೇರಿಯಲ್ಲಿ ನಿಷೇಧಿತ ಬಿಬಿಸಿ ಸಾಕ್ಷ್ಯಚಿತ್ರ – ಇಂಡಿಯಾ: ದಿ ಮೋದಿ ಕ್ವೆಶ್ಚನ್‍ನ್ನು ಪ್ರದರ್ಶಿಸಿರುವುದಾಗಿ ತಿಳಿದುಬಂದಿದೆ. ಎಐಎಸ್‍ಎ ಜ.25ರಂದು ವಿವಿಧ ಸಾಮಾಜಿಕ ಮಾಧ್ಯಮ ಫ್ಲಾಟಾಫಾರಮ್‍ಗಳಲ್ಲಿ ಸಾಕ್ಷ್ಯಚಿತ್ರ ಪ್ರದರ್ಶಿಸುತ್ತಿರುವುದಾಗಿ ಹೇಳಿ ಆಹ್ವಾನ ನೀಡಿತ್ತು, ಭಾರತೀಯ ಸಮಾಜದಲ್ಲಿ […]

ಭಾರತದಲ್ಲಿ ವಿವಾದ ಸೃಷ್ಟಿಸಿದ ಬಿಬಿಸಿ ಸಾಕ್ಷ್ಯ ಚಿತ್ರಗಳ ಸರಣಿ

ನವದೆಹಲಿ,ಜ.28- ಗುಜರಾರ್ ಗಲಭೆಗೆ ಸಂಬಂಧಿಸಿದಂತೆ ಆಗಿನ ಮುಖ್ಯಮಂತ್ರಿ ಹಾಗೂ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಕುರಿತು ಬಿಬಿಸಿ ನಿರ್ಮಿಸಿರುವ ಸಾಕ್ಷ್ಯ ಚಿತ್ರ ವಿವಾದದ ಕಿಚ್ಚು ಎಬ್ಬಿಸಿರು ನಡುವೆಯೇ ಹಿಂದೇ ಇದೇ ರೀತಿ ವಿವಾದ ಸೃಷ್ಟಿಸಿದ ಸಾಕ್ಷ್ಯ ಚಿತ್ರಗಳ ಕುರಿತು ಇಂಡಿಯಾ ಟುಡೆ ವರದಿ ಮಾಡಿದೆ. 2004ರಲ್ಲಿ ಫೈನಲ್ ಸಲ್ಯೂಷನ್, 2015ರಲ್ಲಿ ಇಂಡಿಯಸ್ ಡಾಟರ್, ರಾಮ್ ಕೆ ನಾಮ್, ಇನ್ಶಲ್ಲಾ, ಫುಟ್‍ಬಾಲ್, ಪ್ಯಾಂಟಮ್ ಇಂಡಿಯಾ ಮತ್ತು ಕಲ್ಕತ್ತಾ ಚಿತ್ರಗಳು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ ನಿಧಿಷೇಸಲ್ಪಟ್ಟಿದ್ದವು. ಕೆಲವು ಕಾನೂನು ಹೋರಾಟದಲ್ಲಿ […]

ಮುಂದುವರೆದ ಮೋದಿ ಕುರಿತ ಬಿಬಿಸಿ ಸರಣಿ ಪ್ರದರ್ಶನ

ನವದೆಹಲಿ,ಜ.27- ಜವಾಹರಲಾಲ್ ನೆಹರು ವಿವಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕುರಿತ ವಿವಾದಾತ್ಮಕ ಬಿಬಿಸಿ ಸರಣಿ ಪ್ರದರ್ಶನ ತಡೆಯಲು ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ ಘಟನೆ ನಂತರವೂ ದೆಹಲಿಯ ಮತ್ತೆರಡು ವಿವಿಗಳಲ್ಲಿ ಬಿಬಿಸಿ ಸರಣಿ ಪ್ರದರ್ಶಿಸಲು ತೀರ್ಮಾನಿಸಲಾಗಿದೆ. ರಾಜಧಾನಿಯ ಉತ್ತರ ಭಾಗದಲ್ಲಿರುವ ದೆಹಲಿ ವಿವಿ ಹಾಗೂ ಆಂಬೇಡ್ಕರ್ ವಿವಿಗಳ ಕ್ಯಾಂಪಸ್‍ಗಳಲ್ಲಿ ಮೋದಿ ಕುರಿತ ಬಿಬಿಸಿ ಸರಣಿ ಪ್ರದರ್ಶಿಸಲಾಗುವುದು ಎಂದು ವಿವಿ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಯಾವುದೇ ವಿಶ್ವ ವಿದ್ಯಾಲಯಗಳಲ್ಲಿ ಬಿಬಿಸಿ ಸರಣಿ ಪ್ರದರ್ಶನಕ್ಕೆ ಅನುಮತಿ ನೀಡಿಲ್ಲ ಒಂದು ವೇಳೆ ವಿದ್ಯಾರ್ಥಿಗಳು […]

ವಿವಿಗಳಲ್ಲಿ ಮೋದಿ ಕುರಿತ BBC ಸಾಕ್ಷ್ಯಚಿತ್ರ ಪ್ರದರ್ಶನ, ಹೆಚ್ಚಿದ ಸಂಘರ್ಷ

ನವದೆಹಲಿ, ಜ.25- ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತ ವಿವಾದಿತ ಬಿಬಿಸಿ ಸಾಕ್ಷ್ಯಚಿತ್ರವನ್ನು ದೇಶದ ಹಲವು ವಿಶ್ವವಿದ್ಯಾನಿಲಯಗಳಲ್ಲಿ ಪ್ರದರ್ಶಿಸುತ್ತಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ರಾತ್ರಿ ನವದೆಹಲಿಯ ಜವಾಹರ್‍ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಕೆಲ ವಿದ್ಯಾರ್ಥಿಗಳು ಈ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಕಲ್ಲು ತೂರಾಟ ನಡೆದಿದೆ. ಇದರಿಂದ ಕೆಲಕಾಲ ವಿವಿ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಕೆಲವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಕೇರಳದ ವಿವಿಯೊಂದರಲ್ಲಿ ಪ್ರದರ್ಶನದ ವೇಳೆ ಕೆಲ ವಿದ್ಯಾರ್ಥಿಗಳ […]