ಒಡಿಶಾ ಕರಾವಳಿಯಲ್ಲಿ ಡಾಲ್‍ಫಿನ್ ಗಣತಿ ಆರಂಭ

ಭುವನೇಶ್ವರ, ಡಿ .22 – ಒಡಿಶಾದ ಭಿತರ್ಕಾನಿಕಾ ರಾಷ್ಟ್ರೀಯ ಉದ್ಯಾನವನ ಮತ್ತು ಗಹಿರ್‍ಮಠ ಸಮುದ್ರದಲ್ಲಿ ಡಾಲ್‍ಫಿನ್‍ಗಳ ಗಣತಿ ಆರಂಭವಾಗಿದೆ ಮೂರು ದಿನಗಳ ಕಾರ್ಯಾಚರಣೆಯಲ್ಲಿ 100 ಕ್ಕೂ ಹೆಚ್ಚು ವನ್ಯಜೀವಿ ತಜ್ಞರು ಎಣಿಕೆ ನಡೆಸುತ್ತಿದ್ದಾರೆ. ಪ್ರತಿ ತಂಡವು ಬೈನಾಕ್ಯುಲರ್‍ಗಳು, ಜಿಪಿಎಸ್ ಸೆಟ್‍ಗಳು, ರೇಂಜ್‍ಫೈಂಡರ್‍ಗಳು ಮತ್ತು ಡೇಟಾ ರೆಕಾರ್ಡಿಂಗ್ ಶೀಟ್‍ಗಳನ್ನು ಹೊಂದಿದೆ ಎಂದು ಚಿಲಿಕಾ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ವಿಶ್ವಾದ್ಯಂತ ಅನುಸರಿಸುತ್ತಿರುವ ಸಮೀಕ್ಷೆ ವಿಧಾನವನ್ನು ಬಳಸಿಕೊಂಡು ಈ ಕಾರ್ಯಾಚರಣೆ ನಡೆಸಲಾಗುತ್ತಿದೆ ಒಡಿಶಾ ಕರಾವಳಿಯು ವಿಶೇಷವಾಗಿ ಡಾಲ್‍ಫಿನ್‍ಗಳಿಗೆ ಸೂಕ್ತವಾದ ಆವಾಸಸ್ಥಾನವಾಗಿ […]