ಪೆಟ್ರೋಲ್-ಡಿಸೇಲ್ ದರ ಇಳಿಕೆ ಸಾಧ್ಯತೆ

ನವದೆಹಲಿ, ಡಿ.16- ದೇಶೀಯ ಕಚ್ಚಾ ತೈಲದ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಭಾರೀ ಕಡಿತ ಮಾಡಿದ್ದು, ಶೀಘ್ರ ದಲ್ಲಿ ಪೆಟ್ರೋಲ್, ಡಿಸೇಲ್ ದರ ಕಡಿಮೆಯಾಗುವ ನಿರೀಕ್ಷೆ ಇದೆ. ಸರ್ಕಾರಿ ಸ್ವಾಮ್ಯದ ಒಎನ್‍ಜಿಸಿ ಸಂಸ್ಥೆಗಳು ಉತ್ಪಾದಿಸುವ ಕಚ್ಚಾ ತೈಲದ ಮೇಲೆ ವಿಧಿಸಲಾಗುತ್ತಿದ್ದ ಹೆಚ್ಚುವರಿ ಅಬಕಾರಿ ಸುಂಕವನ್ನು ಪ್ರತಿ ಟನ್‍ಗೆ 4,900 ರೂ.ನಿಂದ 1,700 ರೂ.ಗೆ ಇಳಿಕೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಅಧಿಸೂಚನೆ ತಿಳಿಸಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಆರ್ಥಿಕ ಬಿಕ್ಕಟ್ಟು, ಭಾರತಕ್ಕೆ ಗುಡ್ ನ್ಯೂಸ್ […]

ಏರ್ ಇಂಡಿಯಾ ದೇಶೀಯ ವಿಮಾನ ಕಾರ್ಯಾಚರಣೆಗಳಲ್ಲಿ ಬದಲಾವಣೆ

ನವದೆಹಲಿ,ನ.30-ಏರ್ ಇಂಡಿಯಾದ ಹೊಸ ನಿರ್ವಹಣೆಗೆ ಆದ್ಯತೆಯಾಗಿ ದೇಶೀಯ ವಿಮಾನ ಕಾರ್ಯಾಚರಣೆಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ. ಟಾಟಾ ಕಂಪನಿಯ ಅಡಿಯಲ್ಲಿ ಏರ್ ಇಂಡಿಯಾ ದೇಶದೊಳಗೆ ಲಾಭದಾಯಕವಲ್ಲದ ಮಾರ್ಗಗಳನ್ನು ನಿಲ್ಲಿಸಿ ಈಗ ಮೆಟ್ರೋ-ಟು-ಮೆಟ್ರೋ ಸಂಪರ್ಕದ ಮೇಲೆ ಹೆಚ್ಚು ಗಮನಹರಿಸುತ್ತಿದೆ. ಪಿಎಫ್‌ಐ ನಿಷೇಧವನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್‌ ಏರ್ ಇಂಡಿಯಾ ನೆಟ್‍ವಕ್ ನಲ್ಲಿ ಹಲವಾರು ದೇಶೀಯ ವಿಮಾನಗಳನ್ನು ನಷ್ಟ ಅನುಭವಿಸಿದೆ. ವರದಿಯ ಪ್ರಕಾರ ಮೆಟ್ರೋ-ಟು-ಮೆಟ್ರೋ ಮಾರ್ಗಗಳಲ್ಲಿ ವಿಮಾನ ಸೇವೆ ದ್ವಿಗುಣಗೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ರೌಡಿಗಳ ಪಕ್ಷ, ನಮ್ಮದು ಸುಸಂಸ್ಕೃತರ ಪಕ್ಷ […]