“ಮುಸ್ಲಿಂ ಎಂದು ಸಾಬೀತುಪಡಿಸಲು ಹಿಜಾಬ್ ಅಗತ್ಯವಿಲ್ಲ”

ಶ್ರೀನಗರ,ಫೆ13- ತಾನು ಇಸ್ಲಾಮಿಕ್ ತತ್ವಗಳನ್ನು ಅನುಸರಿಸುತ್ತೇನೆ ಮತ್ತು ತಾನು ಉತ್ತಮ ಮುಸ್ಲಿಂ ಎಂದು ಸಾಬೀತುಪಡಿಸಲು ಹಿಜಾಬ್ ಧರಿಸುವ ಅಗತ್ಯವಿಲ್ಲ ಎಂದು ಕಾಶ್ಮೀರದಲ್ಲಿ 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಅಗ್ರಸ್ಥಾನ ಗಳಿಸಿರುವ ಅರೂಸಾ ಪರ್ವೈಜ್ ಹೇಳಿದ್ದಾರೆ. ಹಿಜಾಬ್ ಧರಿಸದಿದ್ದಕ್ಕಾಗಿ ಆನ್‍ಲೈನ್ ಟ್ರೋಲಿಂಗ್‍ಗೆ ಗುರಿಯಾಗಿ ಕೊಲೆ ಬೆದರಿಕೆಗಳನ್ನೂ ಎದುರಿಸುತ್ತಿರುವ ಆರೂಸಾ ಅವರು, ನಾನು ಅಲ್ಲಾನಲ್ಲಿ ನಂಬಿಕೆ ಹೊಂದಿದ್ದೇನೆ ಮತ್ತು ಇಸ್ಲಾಮಿಕ್ ತತ್ವಗಳನ್ನು ಅನುಸರಿಸುತ್ತೇನೆ. ನಾನು ಉತ್ತಮ ಮುಸ್ಲಿಂ ಎಂದು ಸಾಬೀತುಪಡಿಸಲು ನಾನು ಹಿಜಾಬ್ ಧರಿಸುವ ಅಗತ್ಯವಿಲ್ಲ ಹೇಳಿದ್ದಾರೆ. ಆನ್‍ಲೈನ್ ಟ್ರೋಲಿಂಗ್‍ನಿಂದ […]