ಇಂದಿನಿಂದ ಹಾಸನಾಂಬಾ ದರ್ಶನ ಆರಂಭ 12 ದಿನ ಭಕ್ತರಿಗೆ ದರ್ಶನಭಾಗ್ಯ

ಹಾಸನ,ಅ.13- ನಗರದ ಅಧಿದೇವತೆ ಹಾಸನಾಂಬ ದೇವಿಯು ಇಂದಿನಿಂದ ಭಕ್ತರಿಗೆ ದರ್ಶನ ನೀಡಲಿದ್ದು, ಇಂದು ವಿದ್ಯುಕ್ತವಾಗಿ ಧಾರ್ಮಿಕ ವಿವಿಧಾನಗಳ ಮೂಲಕ ಸರಿಸುಮಾರು 12.16ಕ್ಕೆ ದೇವಸ್ಥಾನದ ಬಾಗಿಲು ತೆರೆಯಲಾಯಿತು. ಈ ಬಾರಿ 15 ದಿನ ಬಾಗಿಲು ತೆರೆಯಲಿದ್ದು 12 ದಿನಗಳ ಕಾಲ ಹಾಸನಾಂಬೆ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಮೊದಲ ಹಾಗೂ ಕೊನೆಯ ದಿನ,ಮತ್ತು ಅ.25 ಸೂರ್ಯ ಗ್ರಹಣ ದಂದು ಭಕ್ತರಿಗೆ ದೇವಿಯ ದರ್ಶನ ಇರುವುದಿಲ್ಲ.ಉಳಿದಂತೆ ಎಲ್ಲ ದಿನಗಳು ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಶ್ವೀಜ ಮಾಸ ಹುಣ್ಣಿಮೆ ನಂತರ ಬರುವ […]