ಕ್ಲಬ್ ಗಳಲ್ಲಿ ಡ್ರೆಸ್ ಕೋಡ್ ನೀತಿ ರದ್ದುಪಡಿಸಲು ಸರ್ಕಾರ ಚಿಂತನೆ

ಬೆಂಗಳೂರು,ಜ.21- ರಾಜ್ಯದ ಕ್ಲಬ್ ಗಳಲ್ಲಿರುವ ಡ್ರೆಸ್ ಕೋಡ್ (ವಸ್ತ್ರ ಸಂಹಿತೆ) ನೀತಿಗೆ ಕೊನೆ ಹಾಡಲು ಸರ್ಕಾರ ಮತ್ತೊಮ್ಮೆ ಪ್ರಯತ್ನಿಸುತ್ತಿದೆ. ಸದ್ಯ ಸಾಂಪ್ರದಾಯಿಕ ಅಥವಾ ಕ್ಲಬ್ ಶಿಷ್ಠಾಚಾರಕ್ಕೆ ವಿರುದ್ಧವಾಗಿ ಧರಿಸು ಧರಿಸಿ ಬಂದವರಿಗೆ ಪ್ರವೇಶಕ್ಕೆ ನಿರ್ಬಂಧವಿದೆ. ಈ ನಿಯಮವನ್ನು ತೆಗೆದುಹಾಕಬೇಕೆಂದು ಈ ಹಿಂದಿನ ಸರ್ಕಾರಗಳು ಪ್ರಯತ್ನಪಟ್ಟಿದ್ದವು. ಆದರೆ ಪ್ರಯೋಜನವಾಗಿಲ್ಲ. ರಾಜ್ಯದಲ್ಲಿ 300ಕ್ಕೂ ಅಕ ಕ್ಲಬ್ ಗಳಿವೆ. ಇವುಗಳಲ್ಲಿ ಬಹುತೇಕ ಕ್ಲಬ್ ಗಳಲ್ಲಿ ಭಾರತೀಯ ಸಂಸ್ಕೃತಿಗೆ ತಕ್ಕಂತೆ ಬಟ್ಟೆ ಧರಿಸಬಾರದು, ಭಾರತೀಯ ಶೈಲಿಯಲ್ಲಿ ಚಪ್ಪಲಿ ಹಾಕಿಕೊಳ್ಳಬಾರದು ಎಂದು ಹೇಳುತ್ತಿದೆ. ನಾವು […]