ಬೇಸಿಗೆ ಆರಂಭಕ್ಕೂ ಮುನ್ನವೆ ಬೆಂಗಳೂರಲ್ಲಿ ಕುಡಿಯುವ ನೀರಿಗೆ ಹಾಹಾಕಾರ

ಬೆಂಗಳೂರು,ಫೆ.13- ಬೇಸಿಗೆ ಆರಂಭಕ್ಕೂ ಮುನ್ನವೆ ನಗರದಲ್ಲಿ ಕುಡಿಯುವ ನೀರಿನ ಹಾಹಾಕಾರ ಮುಗಿಲುಮುಟ್ಟಿದೆ.ಬಿಸಿಲು ಏರಿಕೆಯಾಗುತ್ತಿರುವಂತೆ ನಗರದಲ್ಲಿರುವ ಕೊಳವೆಬಾವಿಗಳು ಒಂದೊಂದೆ ಬತ್ತಲು ಶುರುವಾಗಿರುವುದರಿಂದ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ನೀರಿನ ದಾಹ ನೀಗಿಸುವ ಕೊಳವೆಬಾವಿಗಳು ಬೇಸಿಗೆ ಆರಂಭದಲ್ಲೇ ಬತ್ತಿರೋದ್ರಿಂದ ನಗರದಲ್ಲಿ ಜಲಗಂಡಾಂತರ ಭೀತಿ ಶುರುವಾಗಿದೆ.ಬೇಸಿಗೆ ಮುನ್ನ ಜಲಮಂಡಳಿ ಎಚ್ಚೆತ್ತುಕೊಳ್ಳಲಿಲ್ಲ ಎಂದರೆ ನಗರದಲ್ಲಿ ಜಲಕ್ಷಾಮ ಎದುರಾಗುವುದು ಗ್ಯಾರಂಟಿ ಎನ್ನುವಂತಾಗಿದೆ. ಬೇಸಿಗೆ ಮುನ್ನವೇ ನಗರದಲ್ಲಿರುವ 644ಕ್ಕೂ ಹೆಚ್ಚು ಬೋರ್ ವೆಲ್‍ಗಳು ಬತ್ತಿ ಹೋಗಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೋರ್‍ವೆಲ್‍ಗಳು ಬತ್ತಿಹೋಗುವ […]