ಮಾದಕ ವಸ್ತು ಮಾರಾಟ ಮಾಡುತ್ತಿದ್ದವರ ಬಂಧನ : 20 ಕೆಜಿ ಗಾಂಜಾ ವಶ

ಬೆಂಗಳೂರು,ಜ.19-ಪೊಲೀಸರ ವಶದಲ್ಲಿರುವ ರೌಡಿ ಸ್ಟಾರ್ ರಾಹುಲ್‍ನನ್ನು ಬಿಡಿಸಿಕೊಳ್ಳಲು ಹಣಕ್ಕಾಗಿ ಕಾರಿನಲ್ಲಿ ಗಾಂಜಾ ಮಾರಾಟ ಮಾಡಲು ಬಂದಿದ್ದ ನಾಲ್ವರು ಸಹಚರರನ್ನು ವಿವಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ನ್ಯೂ ಟಿಂಬರ್‍ಯಾರ್ಡ್ ಲೇಔಟ್‍ನ ಪುರುಷೋತ್ತಮ್(26), ಶ್ರೀನಗರದ ಕಿರಣ್(21), ಕಾಟನ್‍ಪೇಟೆ ಮುಖ್ಯರಸ್ತೆಯ ಕಾರ್ತಿಕ್(21) ಮತ್ತು ರಾಹುಲ್(28) ಬಂಧಿತರು. ಆರೋಪಿಗಳಿಂದ 6 ಲಕ್ಷ ರೂ. ಬೆಲೆಯ 20 ಕೆಜಿ 600 ಗ್ರಾಂ ಗಾಂಜಾ, ಕೃತ್ಯಕ್ಕೆ ಬಳಸಿದ್ದ ಹೊಂಡಾ ಸಿಟಿ ಕಾರು, ಮಚ್ಚು, ಹಣ, ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ತಲೆಮರೆಸಿ ಕೊಂಡಿರುವ ಕುಳ್ಳ ರಿಜ್ವಾನ್, […]