ಸಾಂಸ್ಕೃತಿಕ ನಗರಿಗೂ ಹಬ್ಬಿದ ಡ್ರಗ್ಸ್ ಜಾಲ, ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ಮಾರಾಟ

ಮೈಸೂರು : ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ಹೈಟೆಕ್ ಸಿಟಿಗಳಲ್ಲಿರುವ ಡ್ರಗ್ಸ್ ಜಾಲ ಮೈಸೂರಿಗೂ ಆವರಿಸಿದೆ. ಸಾಂಸ್ಕೃತಿಕ ನಗರಿ ಮೈಸೂರಿನ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಜಾಲ ಬಯಲಾಗಿದೆ. ಮೈಸೂರಿನ ಕಾಲೇಜು ವಿದ್ಯಾರ್ಥಿಗಳೆ ಇವರ ಟಾರ್ಗೆಟ್ ಆಗಿದ್ದು, ಡ್ರಗ್ಸ್ ಮಾರಾಟದಿಂದ ಲಕ್ಷ ಲಕ್ಷ ಸಂಪಾದಿಸುತ್ತಿದ್ದರು. ಮೈಸೂರಿನ ಪುಲಕೇಶಿ ರಸ್ತೆಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದಾಗ ಸಿಸಿಬಿ ಪೋಲಿಸರು ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳಿಂದ MDMA ಡ್ರಗ್ಸ್, 43 ಸಾವಿರ ನಗದು ಹಾಗೂ ಮೊಬೈಲ್ ವಶ. […]