ಡ್ರಗ್ ಪೆಡ್ಲಿಂಗ್ : ರೌಡಿ ಸೇರಿ ಮೂವರು ವಶಕ್ಕೆ

ಬೆಂಗಳೂರು, ಜ.3- ಡ್ರಗ್ ಪೆಡ್ಲಿಂಗ್‍ನಲ್ಲಿ ತೊಡಗಿದ್ದ ರೌಡಿ ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿ 3 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಉಮ್ರಾನ್ ಬಾಷಾ, ಶಹಬಾಜ್ ಖಾನ್, ರೌಡಿ ಸೈಯದ್ ಯಾರಬ್ ಬಂಧಿತ ಡ್ರಗ್ ಪೆಡ್ಲರ್‍ಗಳು. ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕೊಲೆ ಪ್ರಕರಣದ ಆರೋಪಿಯಾಗಿರುವ ಸೈಯದ್ ಯಾರಬ್ ಅದೇ ಠಾಣೆಯ ರೌಡಿ ಪಟ್ಟಿಯಲ್ಲಿ ಈತನ ಹೆಸರಿದೆ. ಈತ ಸಹಚರರ ಗುಂಪು ಕಟ್ಟಿಕೊಂಡು ಜೆಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಬ್ಬ ರೌಡಿಯಿಂದ ಮಾದಕ ವಸ್ತುಗಳನ್ನು […]