ಡ್ರಗ್ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಗಳು ಸೇರಿ ನಾಲ್ವರ ಬಂಧನ

ಬೆಂಗಳೂರು,ಮಾ.6- ಸಿಂಥೆಟಿಕ್ ಡ್ರಗ್ಸ್‍ಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳು, ಒಬ್ಬ ಮಾದಕ ವ್ಯಸನಿ ಸೇರಿದಂತೆ ನಾಲ್ವರನ್ನು ಈಶಾನ್ಯ ವಿಭಾಗದ ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ಯಲಹಂಕದ ಪ್ರಕೃತಿ ನಗರದ ಒಂದನೇ ಕ್ರಾಸ್ ಬಳಿ ಮೂವರು ಎರಡು ದ್ವಿಚಕ್ರ ವಾಹನದಲ್ಲಿ ಎಂಡಿಎಂ ಸಿಂಥೆಟಿಕ್ ಡ್ರಗನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ಇನ್‍ಸ್ಪೆಕ್ಟರ್‍ಗಳಾದ ಕೆ.ಪಿ.ಸತ್ಯನಾರಾಯಣರಾವ್, ಸಂತೋಷ್ ರಾಮ್ ಅವರ ತಂಡ ದಾಳಿ ನಡೆಸಿದೆ. ಜಾಲ ಹೋಬಳಿಯ ಸಾತನೂರು ವಿಲೇಜ್‍ನಲ್ಲಿ ವಾಸವಿರುವ ನೈಜೀರಿಯಾ ಮೂಲದ ಅಲ್‍ಉದೆಉದೆ ಉಜಾ(36), […]