ಔಷಧಿ-ವೈದ್ಯಕೀಯ ಉಪಕರಣ ಪೂರೈಕೆದಾರರಿಗೆ ಇನ್ನೂ ಹಣ ನೀಡದ ಸರ್ಕಾರ

ಬೆಂಗಳೂರು,ಜ.12- ಈ ಹಿಂದೆ ಒಂದು ಮತ್ತು 2ನೇ ಅಲೆಯ ವೇಳೆ ಸರ್ಕಾರಕ್ಕೆ ಔಷಧಿ ಮತ್ತು ಉಪಕರಣಗಳನ್ನು ಪೂರೈಸಿದ್ದ ಕೆಎಸ್ ಸಿಎಸ್‍ಎಂಎಲ್‍ಗೆ ಸರ್ಕಾರ ಈವರೆಗೂ ಹಣವನ್ನೇ ಬಿಡುಗಡೆ ಮಾಡಿಲ್ಲ. ಸರಿಸುಮಾರು ಆರು ತಿಂಗಳು ಕಳೆದರೂ ಸಂಸ್ಥೆಗೆ ಹಣವನ್ನು ಕೊಡದಿರುವುದರಿಂದ ಪೂರೈಕೆದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಒಂದು ಕಡೆ ರಾಜ್ಯದಲ್ಲಿ ಮತ್ತೆ ಮೂರನೇ ಅಲೆ ಸದ್ದಿಲ್ಲದೆ ಕಾಲಿಟ್ಟಿದ್ದು ಅಗತ್ಯವಾದ ಔಷಧಿ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಗೆ ಸರ್ಕಾರ ಮುಂದಾಗಬೇಕಿತ್ತು. ಆದರೆ ಈ ಹಿಂದಿನ ಎರಡು ಅಲೆಯ […]