ಡ್ರಗ್ಸ್ ಸಾಗಿಸುತ್ತಿದ್ದ ಜೈಲಿನ ಎಫ್‍ಡಿಎ ಸೆರೆ
ಬೆಂಗಳೂರು, ಫೆ.3- ಕೇಂದ್ರ ಕಾರಾಗೃಹದಲ್ಲಿ ಖೈದಿಗಳಿಗೆ ಮಾದಕ ವಸ್ತು ಸರಬರಾಜಾಗುತ್ತಿದೆ ಎಂಬ ದೂರು ಕೇಳಿ ಬಂದಿರುವ ಬೆನ್ನಲ್ಲೇ ಒಳ ಉಡುಪಿನಲ್ಲಿ ಡ್ರಗ್ಸ್ ಇಟ್ಟುಕೊಂಡು ಸರಬರಾಜು ಮಾಡುತ್ತಿದ್ದ ಜೈಲಿನ ಪ್ರಥಮ ದರ್ಜೆ ಸಹಾಯಕನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗಂಗಾಧರ್(53) ಜೈಲು ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದು , ಪೊಲೀಸರ ಬಂಧನದಲ್ಲಿರುವ ಪ್ರಥಮ ದರ್ಜೆ ಸಹಾಯಕ. ಮಾದಕ ದ್ರವ್ಯಗಳಾದ ಎಲ್‍ಎಸ್‍ಡಿ ಮತ್ತು ಹ್ಯಾಶ್ ಆಯಿಲ್‍ನ್ನು ಆರೋಪಿ ಗಂಗಾಧರ್ ಒಳ ಉಡುಪಿನಲ್ಲಿ ಇಟ್ಟುಕೊಂಡು ಜೈಲಿನೊಳಗೆ ಸಾಗಿಸುವ ಯತ್ನ ಮಾಡುತ್ತಿದ್ದನು. […]