ಅಭಿಮಾನಿಗಳ 13 ವರ್ಷಗಳ ಕನಸು ನನಸು, ವಿಷ್ಣು ಸ್ಮಾರಕ ಲೋಕಾರ್ಪಣೆ

ಮೈಸೂರು,ಜ29- ಬಹುವರ್ಷಗಳಿಂದ ವಿಷ್ಣುವರ್ಧನ್ ಅಭಿಮಾನಿಗಳು ಎದುರು ನೋಡುತ್ತಿದ್ದ ವಿಷ್ಣು ಸ್ಮಾರಕ ಇಂದು ಮೈಸೂರಿನ ಉದ್ಭೂರಿನಲ್ಲಿ ಲೋಕಾರ್ಪಣೆಗೊಂಡಿದೆ. ಕಳೆದ 13 ವರ್ಷಗಳ ಕನಸು ನನಸಾಗಿದ್ದು, ವಿಷ್ಣು ಅಭಿಮಾನಿಗಳಲ್ಲಿ ಉತ್ಸಾಹ ಇಮ್ಮಡಿಗೊಂಡಿತ್ತು. ವಿಷ್ಣುವರ್ಧನ್ ಅವರ ತವರೂರಿನಲ್ಲಿ ಅವರ ಸ್ಮಾರಕ ಉದ್ಘಾಟನೆಯಾಗುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಸ್ಮಾರಕ ಉದ್ಘಾಟನೆ ಅಂಗವಾಗಿ ಇತ್ತ ವಿಷ್ಣು ಪುಣ್ಯ ಭೂಮಿ ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು. ಮೊದಲಿಗೆ ಮೈಸೂರಿನ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಇರುವ ಡಾ.ವಿಷ್ಣುವರ್ಧನ್ ಉದ್ಯಾನವನದ […]

ಡಾ.ವಿಷ್ಣುವರ್ಧನ್ 13ನೇ ಪುಣ್ಯಸ್ಮರಣೆ, ಅಭಿಮಾನಿಗಳಿಂದ ಪಾದಯಾತ್ರೆ, ರಕ್ತದಾನ

ಬೆಂಗಳೂರು,ಡಿ.30- ಕನ್ನಡಿಗರ ಹೃದಯಗಳನ್ನು ಗೆದ್ದ ನಟ ಡಾ. ವಿಷ್ಣುವರ್ಧನ್ ನಮ್ಮನ್ನು ಅಗಲಿ ಇಂದಿಗೆ 13 ವರ್ಷ ಕಳೆದಿದೆ. ಪುಣ್ಯಸ್ಮರಣೆ ದಿನವಾದ ಇಂದು ರಾಜ್ಯದ ಮೂಲೆ ಮೂಲೆಗಳಿಂದ ಬಂದ ಅಭಿಮಾನಿಗಳು ಅಭಿಮಾನಿ ಸ್ಟುಡಿಯೋದ ಅವರ ಸಮಾಗೆ ನಮನ ಸಲ್ಲಿಸಿದ್ದಾರೆ. ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ ಸದಸ್ಯರು ಬನಶಂಕರಿ ದೇವಸ್ಥಾನದಿಂದ ಅಭಿಮಾನಿ ಸ್ಟುಡಿಯೋವರೆಗೆ ಸುಮಾರು ಹದಿನೈದು ಕಿಲೋಮೀಟರ್ ಪಾದಯಾತ್ರೆ ಮೂಲಕ ಪುಣ್ಯಭೂಮಿಗೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ಐವತ್ತಕ್ಕೂ ಹೆಚ್ಚು ಅಭಿಮಾನಿಗಳು ಅಭಿಮಾನಿ ಸ್ಟುಡಿಯೋವರೆಗೂ ಮೈಸೂರಿನಿಂದ ಪಾದಯಾತ್ರೆ ಕೈಗೊಂಡು ವಿಷ್ಣು ಸಮಾಗೆ ಪೂಜೆ […]