ಮೈಸೂರಿನಲ್ಲಿ ದಮ್ ಬಿರಿಯಾನಿ ಹೊಟೇಲ್ ಮಾಲೀಕ ಆತ್ಮಹತ್ಯೆ

ಮೈಸೂರು,ಜು.13- ಸಾಲದ ಹೊರೆಗೆ ಬೇಸತ್ತ ದಮ್ ಬಿರಿಯಾನಿ ಹೋಟೆಲ್ ಮಾಲೀಕ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಬೋಗಾದಿಯಲ್ಲಿ ನಡೆದಿದೆ. ಆರೀಫ್ ಪಾಷಾ(28) ಮೃತ ದುರ್ದೈವಿ. ಮೂಲತಃ ಆಂಧ್ರದ ನಿವಾಸಿಯಾದ ಆರೀಫ್ ಪಾಷ ಬೋಗಾದಿ ರಿಂಗ್ ರೋಡ್‍ನಲ್ಲಿ ಹೈದರಾಬಾದ ದಮ್ ಬಿರಿಯಾನಿ ಹೋಟೆಲ್ ಆರಂಭಿಸಿದ್ದು, ಹಿನಕಲ್‍ನಲ್ಲಿ ಪತ್ನಿ ನಜೀಮಾ ಜೊತೆ ವಾಸವಿದ್ದರು. ವ್ಯಾಪಾರ ವಹಿವಾಟಿಗಾಗಿ ಸಾಲ ಮಾಡಿದ್ದ ಆರೀಫ್ ಪಾಷಾ ತೀರಿಸಲು ಸಾಧ್ಯವಾಗದೆ ಮನ ನೊಂದು ಹೋಟೆಲ್‍ನಲ್ಲೇ ನೇಣಿಗೆ ಶರಣಾಗಿದ್ದಾರೆ. ಪತ್ನಿ ನಜೀಮಾ ಸರಸ್ವತಿ ಪುರಂ […]