ದೇಶದ ಸಾಮಾನ್ಯ ಜನರ ಸೇವೆಯೇ ನನ್ನ ಪ್ರಥಮ ಆಧ್ಯತೆ : CJI ಚಂದ್ರಚೂಡ್

ಬೆಂಗಳೂರು, ನ.9- ದೇಶದ ಸಾಮಾನ್ಯ ಜನರ ಸೇವೆಯೇ ನನ್ನ ಪ್ರಥಮ ಆಧ್ಯತೆ ಎಂದು ಸುಪ್ರೀಂಕೋರ್ಟ್‍ನ ನೂತನ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದ್ದಾರೆ. ರಾಷ್ಟ್ರಪತಿ ಭವನದಲ್ಲಿಂದು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಹಾತ್ಮಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ನ್ಯಾಯಾಂಗದ ಮೇಲಿನ ಜನರ ನಂಬಿಕೆಯನ್ನು ಹೆಚ್ಚಿಸಲು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜನರಿಗೆ ಸೇವೆ ಸಲ್ಲಿಸುವುದು ನನ್ನ ಮೊದಲ ಆದ್ಯತೆ. ಮುಂದಿನ ದಿನಗಳಲ್ಲಿ ನೀವೆ ನೋಡಿ ಎಂದರು. ಸಚಿವ ಸಂಪುಟ ಸೇರಲು ಶಾಸಕರು ಹಿಂದೇಟು ದೇಶದ ಎಲ್ಲ […]