ನಾಗರಿಕರಿಗೆ ಎಂಬೆಡೆಡ್ ಚಿಪ್‍ ಹೊಂದಿರುವ ಇ-ಪಾಸ್‍ಪೋರ್ಟ್ ಸೌಲಭ್ಯ

ನವದೆಹಲಿ,ಫೆ.1- ದೇಶದಲ್ಲಿ ಎಂಬೆಡೆಡ್ ಚಿಪ್‍ಗಳು ಮತ್ತು ಫ್ಯೂಚರ್‍ಸ್ಟಿಕ್ ತಂತ್ರಜ್ಞಾನವನ್ನು ಹೊಂದಿರುವ ಇ-ಪಾಸ್‍ಪೋರ್ಟ್‍ಗಳನ್ನು ಸಾರ್ವಜನಿಕರಿಗೆ ನೀಡಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ ಘೋಷಿಸಿದ್ದಾರೆ. 2019ರಲ್ಲಿ ಈ ಸೇವೆಯನ್ನು ಘೋಷಿಸಲಾಗಿತ್ತು. ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ಮಾನದಂಡಗಳನ್ನು ಅನುಸರಿಸಿ ಇ-ಪಾಸ್‍ಪೋರ್ಟ್‍ಗಳನ್ನು ರೂಪಿಸಲಾಗಿದೆ. ಇವುಗಳು ಶೀಘ್ರವಾಗಿ ನಾಗರಿಕರಿಗೆ ಸಿಗಲಿವೆ. ಈ ಹಿಂದಿನಂತೆ ಸಾಂಪ್ರದಾಯಿಕ ಶೈಲಿಯಲ್ಲೇ ಪಾಸ್‍ಪೋರ್ಟ್‍ಗೆ ಅರ್ಜಿ ಸಲ್ಲಿಸಬೇಕು. ಕಾಗದದ ಪಾಸ್‍ಪೋರ್ಟ್ ಬದಲಾಗಿ ಇ-ಪಾಸ್‍ಪೋರ್ಟ್‍ಗಳು ಎಂಬೆಡೆಡ್ ಚಿಪ್‍ಗಳನ್ನು ಹೊಂದಿರಲಿವೆ. ಇದರಲ್ಲಿ ವೈಯಕ್ತಿವಾದ ಎಲ್ಲಾ ಮಾಹಿತಿಗಳು ಜೈವಿಕ, ಭೌಗೋಳಿಕ ವಿವರಗಳು ಪುಟ […]