ಗಳಿಕೆ ರಜೆ ನಗದೀಕರಣ ಯೋಜನೆಗೆ ಬಿಬಿಎಂಪಿ ಎಳ್ಳು-ನೀರು, ನೌಕರರ ಆಕ್ರೋಶ

ಬೆಂಗಳೂರು,ಫೆ.15- ಅಧಿಕಾರಿ ಮತ್ತು ನೌಕರರ ಗಳಿಕೆ ರಜೆ ನಗದೀಕರಣ ಸೌಲಭ್ಯ ಜಾರಿಗೆ ಬಿಬಿಎಂಪಿ ಆಡಳಿತ ಮೀನಾಮೇಷ ಎಣಿಸುತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಸರ್ಕಾರಿ ನೌಕರರು ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ ಆಯಾ ವರ್ಷದ ಜ.1ರಿಂದ ಪ್ರಾರಂಭಗೊಂಡಂತೆ ಡಿ.31 ರವರೆಗೆ 155 ದಿನಗಳಿಗೆ ಮೀರದಂತೆ ಗಳಿಕೆ ರಜೆಯನ್ನು ಆದ್ಯರ್ಪಿಸಿ ಮತ್ತೆ ರಜೆ ವೇತನಕ್ಕೆ ನಗದೀಕರಣ ಸೌಲಭ್ಯ ಪಡೆಯಬಹುದಾಗಿದೆ. ಸರ್ಕಾರ ಹಾಗೂ ಬಿಬಿಎಂಪಿಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ವೃಂದದ ಅಕಾರಿ ಮತ್ತು ನೌಕರರು ಒಂದು ತಿಂಗಳ ಮುಂಚಿತವಾಗಿ ನೋಟಿಸ್ ನೀಡಿ ಜ.1 […]