ಇಕ್ವಿಡಾರ್‌ನಲ್ಲಿ ಪ್ರಬಲ ಭೂಕಂಪ, 15 ಮಂದಿ ಸಾವು

ಕ್ವಿಟೊ,ಮಾ.19- ದಕ್ಷಿಣ ಅಮೆರಿಕದ ಇಕ್ವಿಡಾರ್‍ನಲ್ಲಿ ಪ್ರಬಲ ಭೂಕಂಪ ಸಂಭವಿಸಿ 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ 126ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಇಕ್ವಿಡಾರ್ ಮತ್ತು ಉತ್ತರ ಪೆರುವಿನ ಪ್ರದೇಶದಲ್ಲಿ ರಿಕ್ಟರ್ ಮಾಪನದಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪನದಿಂದ ಕಟ್ಟಡಗಳು ಧರೆಗುರುಳಿವೆ. ಜನರು ಮನೆಬಿಟ್ಟು ಬೀದಿಗೆ ಬಂದಿದ್ದಾರೆ. ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರೆದಿದೆ. ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಸತತ ಕಾರ್ಯಾಚರಣೆ ನಡೆಸಿ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ದೇಶದ ಕರಾವಳಿ ಗುವಾಯಸ್ […]

ನ್ಯೂಜಿಲ್ಯಾಂಡ್‌ನಲ್ಲಿ ಪ್ರಬಲ ಭೂಕಂಪ

ನ್ಯೂಜಿಲ್ಯಾಂಡ್, ಮಾ.16- ನ್ಯೂಜಿಲ್ಯಾಂಡ್ ಉತ್ತರ ಭಾಗದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಉತ್ತರ ಭಾಗದಲ್ಲಿರುವ ಕೆಮಾರ್ಡೆಕ್ ದ್ವೀಪ ಪ್ರದೇಶದಲ್ಲಿ ಇಂದು ಬೆಳಗ್ಗೆ 6.40ರ ಸುಮಾರಿಗೆ ರಿಕ್ಟರ್ ಮಾಪನದಲ್ಲಿ 7.1 ತೀವ್ರತೆ ಕಂಪನ ಉಂಟಾಗಿದೆ ಎಂದು ಯುನಿಟೆಡ್ ಸ್ಟೇಟ್ ಜಿಯಾಲಜಿಕಲ್ ಸರ್ವೆ ಹೇಳಿದೆ. ಭೂಕಂಪವು ದ್ವೀಪ ಪ್ರದೇಶದ 10 ಕಿಲೋ ಮೀಟರ್ ಆಳದಲ್ಲಿ ಸಂಭವಿಸಿದೆ. ಸುಮಾರು 300 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕರಾವಳಿ ಪ್ರದೇಶಗಳಿಗೆ ಅಪಾಯಕಾರಿ ಸುನಾಮಿಗಳು ಉಂಟಾಗುವ ಎಚ್ಚರಿಕೆ ನೀಡಲಾಗಿದೆ.ನ್ಯೂಜಿಲ್ಯಾಂಡ್ಗೆ ಯಾವುದೇ ಸುನಾಮಿ ಭೀತಿ ಇಲ್ಲ. ತುರ್ತು ಸಂದರ್ಭ […]

ಗುಜರಾತ್‍ನ ಅಮೇಲಿಯಲ್ಲಿ 2 ವರ್ಷದಲ್ಲಿ 400 ಬಾರಿ ಭೂಕಂಪ..!

ಅಹಮದಾಬಾದ್,ಫೆ.26- ಕಳೆದ ಎರಡು ವರ್ಷಗಳಲ್ಲಿ 400ಕ್ಕೂ ಹೆಚ್ಚು ಲಘು ಕಂಪನದ ಮೂಲಕ ಗುಜರಾತ್‍ನ ಅಮ್ರೇಲಿ ಜಿಲ್ಲೆಯ ಮಿಟಿಯಾಲ ಗ್ರಾಮ ಭೂಕಂಪದ ಸಮೂಹ ಕೇಂದ್ರ ಬಿಂಧುವಾಗಿ ಮಾರ್ಪಟ್ಟಿದೆ. ಸಾಮಾನ್ಯವಾಗಿ ಅಲ್ಪಾವಯ ಸಣ್ಣ ಭೂಕಂಪಗಳ ಅನುಕ್ರಮವಾಗಿ ದಿನಗಳು, ವಾರಗಳು ಅಥವಾ ಕೆಲವೊಮ್ಮೆ ತಿಂಗಳುಗಳವರೆಗೆ ಮುಂದುವರಿಯಬಹುದು ಅಥವಾ ಒಂದೇ ಸ್ಥಳದಲ್ಲಿ ಪದೇ ಪದೇ ಮರುಕಳಿಸಬಹುದು. 400ಕ್ಕೂ ಹೆಚ್ಚಿನ ಕಂಪನಗಳನ್ನು ಅನುಭವಿಸಿದ ಮಿಟಿಯಾಲ ಗ್ರಾಮಸ್ಥರು ಮುನ್ನೆಚ್ಚರಿಕೆ ಕ್ರಮವಾಗಿ ತಮ್ಮ ಮನೆಗಳ ಹೊರಗೆ ಮಲಗಲು ಪ್ರಾರಂಭಿಸಿದ್ದಾರೆ. ಸ್ಥಳೀಯ ನಿವಾಸಿ ಮಹಮ್ಮದ್ ರಾಥೋಡ್ ಮಾತನಾಡಿ, ಕಂಪನದ […]

ಇರಾನ್‍ನಲ್ಲಿ ಪ್ರಬಲ ಭೂಕಂಪ, 7 ಮಂದಿ ಸಾವು

ಟೆಹ್ರಾನ್(ಇರಾನ್),ಜ.29-ಇರಾನ್ ಕೊಯ್ ನಗರದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಏಳು ಜನ ಮೃತಪಟ್ಟು 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕೊಯ್ ನಗರದಲ್ಲಿ ಭೂಕಂಪನದ ತೀವ್ರತೆ ರಿಕ್ಟಟರ್ ಮಾಪನದಲ್ಲಿ 5.59 ದಾಖಲಾಗಿದೆ ಎಂದು ಯು.ಎಸ್.ಜಿಯಾಲಾಜಿಕಲ್ ಸರ್ವೆ ತಿಳಿಸಿದೆ.ನಿನ್ನೆ ರಾತ್ರಿ 11.44ರ ಸುಮಾರಿಗೆ ಭೂಕಂಪನ ಸಂಭವಿಸಿದ್ದು, ಕಂಪನದ ಕೇಂದ್ರಬಿಂದು ಸುಮಾರು 10 ಕಿ.ಮೀ ಆಳದಲ್ಲಿತ್ತು. ಒಟ್ಟು 14 ಕಿ.ಮೀ ವ್ಯಾಪ್ತಿಯಲ್ಲಿ ಭೂಮಿ ನಡುಗಿದ ಅನುಭವವಾಗಿದೆ. ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-01-2023) ಭೂಕಂಪನದಿಂದ ಹಲವೆಡೆ ಕಟ್ಟಡಗಳಿಗೆ ಧಕ್ಕೆಯಾಗಿದೆ. 7ಕ್ಕೂ ಹೆಚ್ಚು ಮಂದಿ […]