ಕಾಶ್ಮೀರದಲ್ಲಿ ಭೂಕಂಪ

ಜಮ್ಮು,ಜ.22- ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ 4.0 ತೀವ್ರತೆಯ ಭೂಕಂಪ ಇಂದು ನಸುಕಿನ ಜಾವ ಸಂಭವಿಸಿದೆ ಎಂದು ಓರ್ವ ಅಕಾರಿ ತಿಳಿಸಿದ್ದಾರೆ. ಇಂದು ನಸುಕಿನ ಜಾವ 2.53ರಲ್ಲಿ ಭೂಕಂಪನ ಉಂಟಾಗಿದೆ. ಜೀವಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ತತ್‍ಕ್ಷಣದ ವರದಿಗಳಿಲ್ಲ ಎಂದು ವಿಪತ್ತು ನಿರ್ವಹಣಾ ನಿರ್ದೇಶಕ ಆಮಿರ್ ಅಲಿ ಹೇಳಿದ್ದಾರೆ. ದೋಡಾ ಪ್ರಾಂತ್ಯದಲ್ಲಿ ಭೂಮಿಯ ಮೇಲ್ಮೈನಿಂದ 10 ಕಿ.ಮೀ.ಗಳಷ್ಟು ಕೆಳಗೆ ಭೂಕಂಪದ ಕೇಂದ್ರ ಇತ್ತು ಎಂದು ಅವರು ನುಡಿದಿದ್ದಾರೆ.