ಭಾರತ ಸೇರಿ 6 ರಾಷ್ಟ್ರಗಳ ವೀಸಾ ಸರಳೀಕರಣಕ್ಕೆ ಮುಂದಾದ ರಷ್ಯಾ

ಮಾಸ್ಕೋ,ಮಾ.6- ಭಾರತ ಸೇರಿದಂತೆ ಆರು ದೇಶಗಳ ವೀಸಾ ಕಾರ್ಯ ವಿಧಾನಗಳನ್ನು ಸರಾಗಗೊಳಿಸುವ ಪ್ರಕ್ರಿಯೆಗೆ ರಷ್ಯಾ ಚಾಲನೆ ನೀಡಿದೆ. ಭಾರತ, ಸಿರಿಯಾ, ಇಂಡೋನೆಷ್ಯಾ, ಅಂಗೋಲಾ, ವಿಯೆಟ್ನಾಂ ಮತ್ತು ಫಲಿಫೈನ್ ರಾಷ್ಟ್ರಗಳ ನಾಗರೀಕರಿಗೆ ಅನುಕೂಲವಾಗುವಂತೆ ವೀಸಾ ಸರಳೀಕರಣಕ್ಕೆ ಚಾಲನೆ ನೀಡಲಾಗಿದೆ ಎಂದು ರಷ್ಯಾ ಉಪ ವಿದೇಶಾಂಗ ಸಚಿವ ಎವ್ಗೆನಿ ಇವಾನೋವ್ ತಿಳಿಸಿದ್ದಾರೆ. ಸೌದಿ ಅರೇಬಿಯಾ, ಬಾರ್ಬಡೋಸ್, ಹೈಟಿ, ಜಾಂಬಿಯಾ, ಕುವೈತ್, ಮಲೇಷ್ಯಾ, ಮೆಕ್ಸಿಕೊ ಮತ್ತು ಟ್ರಿನಿಡಾಡ್ ಸೇರಿದಂತೆ 11 ದೇಶಗಳೊಂದಿಗೆ ವೀಸಾ ಮುಕ್ತ ಪ್ರವಾಸಗಳ ಕುರಿತು ರಷ್ಯಾ ಅಂತರ್‍ ಸರ್ಕಾರಿ […]