ಉದ್ಧವ್ ಕಾಲೆಳೆದ ಸಚಿವ ಅನುರಾಗ್ ಠಾಕೂರ್

ಇಂದೋರ್,ಫೆ.22 – ಏಕನಾಥ್ ಶಿಂದೆ ಅವರ ಬಣವು ನಿಜವಾದ ಶಿವಸೇನೆ ಎಂದು ಕೇಂದ್ರ ಚುನಾವಣೆ ಆಯೋಗ ಸ್ಪಷ್ಟಪಡಿಸಿದ್ದು, ಪಕ್ಷದ ಕಾರ್ಯಕರ್ತರ ಬೆಂಬಲ ಯಾರಿಗಿದೆ ಎಂಬುವುದು ಉದ್ಧವ್ ಠಾಕ್ರೆ ಅವರಿಗೆ ಅರ್ಥ ಆಗಿರಬಹುದು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಟೀಕೆ ಮಾಡಿದ್ದಾರೆ. ಶಿವಸೇನೆಯ ಸೈನಿಕರ, ಪಕ್ಷದ ಶಾಸಕರ, ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರ ಬೆಂಬಲ ಯಾರಿಗಿದೇ ಎಂಬುವುದು ಠಾಕ್ರೆ ಅವರಿಗೆ ಅರ್ಥವಾಗಿದೆ. ಈ ಸಂಖ್ಯೆಗಳೇ ಪೂರ್ಣ ಕಥೆಯನ್ನು ಹೇಳುತ್ತವೆ. ಕಳೆದು ಹೋದದ್ದಕ್ಕೆ ಚಿಂತಿಸಿ ಫಲವೇನು ಎಂದು ವ್ಯಂಗ್ಯವಾಡಿದ್ದಾರೆ. […]