ದೇಶದ ಜಿಡಿಪಿ ಶೇ.8ರಿಂದ 8.5 ವೃದ್ಧಿಯ ನಿರೀಕ್ಷೆ

ನವದೆಹಲಿ, ಜ.31-ಮುಂದಿನ ಆರ್ಥಿಕ ವರ್ಷದ ಸಮೀಕ್ಷೆ ವರದಿಯನ್ನು ಸಂಸತ್‍ ನಲ್ಲಿಂದು ಮಂಡಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್‍ ಅವರು, ದೇಶದ ಜಿಡಿಪಿ ಶೇ.8.5ಕ್ಕೆ ವೃದ್ಧಿಯಾಗುವ ಮುನ್ಸೂಚನೆ ನೀಡಿದ್ದಾರೆ. ಕೋವಿಡ್‍ ಕಾರಣದಿಂದ ಆರ್ಥಿಕ ಹಿಂಜರಿತ ಅನುಭವಿಸುತ್ತಿರುವ ದೇಶಕ್ಕೆ ಹೊಸ ಸಮೀಕ್ಷೆ ಆಶಾದಾಯಕವಾಗಿದೆ. ದೇಶಿಯ ಉತ್ಪಾದನಾ ವಲಯದ ಜಿಡಿಪಿ ಶೇ.8 ರಿಂದ 8.5ಕ್ಕೆ ಹೆಚ್ಚಳವಾಗುವ ಅಂದಾಜಿದೆ. ಪ್ರಸಕ್ತ ಆರ್ಥಿಕ ವರ್ಷದ ಜಿಡಿಪಿ ಬೆಳವಣಿಗೆ ಶೇ.9.2ರಷ್ಟಾಗಬಹುದು ಎಂದು ವಿಶ್ಲೇಷಿಸಿದ್ದಾರೆ. 2022ರ ಏಪ್ರಿಲ್‍ ಒಂದರಿಂದ ಆರಂಭವಾಗುವ ಆರ್ಥಿಕ ವರ್ಷದ ಸಮೀಕ್ಷೆಯ ವರದಿಯ ಅಂಕಿ […]