ಜೂನ್ ತಿಂಗಳೊಳಗೆ 8 ಸಾವಿರ ಶಾಲಾ ಕೊಠಡಿಗಳು ನಿರ್ಮಾಣ : ಸಿಎಂ

ಬೆಂಗಳೂರು,ಫೆ.20-ಪ್ರಸಕ್ತ ಜೂನ್ ತಿಂಗಳ ಒಳಗೆ ರಾಜ್ಯಾದ್ಯಂತ ಎಂಟು ಸಾವಿರ ಶಾಲಾ ಕೊಠಡಿಗಳು ನಿರ್ಮಾಣ ಪೂರ್ಣಗೊಳ್ಳಿದ್ದು, ಇದಕ್ಕೆ ವಿವೇಕ ಎಂದು ಹೆಸರು ಇಡಲು ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿಧಾನಸಭೆಯಲ್ಲಿಂದು ರಾಜ್ಯಪಾಲರ ಭಾಷಣದ ವಂದನಾ ನಿರ್ಣಯಕ್ಕೆ ಉತ್ತರಿಸಿದ ಅವರು, ಇದೇ ಮೊದಲ ಬಾರಿಗೆ ನಮ್ಮ ಸರ್ಕಾರ ಒಟ್ಟು 8 ಸಾವಿರ ಶಾಲಾ ಕೊಠಡಿಗಳನ್ನು ಹೊಸದಾಗಿ ನಿರ್ಮಾಣ ಮಾಡಲಿದೆ. ಹಿಂದಿನ ಯಾವುದೇ ಸರ್ಕಾರಗಳು ಏಕಕಾಲದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಿರಲಿಲ್ಲ. ಇದೇ […]

8 ಮಂದಿ ಡಿಸಿಎಂ ಮಾಡುವ ಬಗ್ಗೆ ದೆಹಲಿಯಲ್ಲಿ ಬಿಜೆಪಿ ಸಭೆ : ಹೆಚ್‌ಡಿಕೆ

ಬೆಂಗಳೂರು,ಫೆ.5- ಎಂಟು ಮಂದಿ ಉಪಮುಖ್ಯಮಂತ್ರಿ ಮಾಡುವ ಬಗ್ಗೆ ದೆಹಲಿಯಲ್ಲಿ ಸಭೆ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಪಂಚರತ್ನ ರಥಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಂಟು ಜನ ಉಪಮುಖ್ಯಮಂತ್ರಿ ಆಗುವವರು ಯಾರು ಎಂಬ ಹೆಸರನ್ನು ಬಹಿರಂಗಪಡಿಸಬಲ್ಲೆ ಎಂದರು. ದೇಶವನ್ನು ಹಾಳು ಮಾಡುವ ಬಿಜೆಪಿಯ ಹುನ್ನಾರ, ಆರ್‍ಎಸ್‍ಎಸ್ ಕುತಂತ್ರಕ್ಕೆ ಬಲಿಯಾಗಬೇಡಿ. ಶೃಂಗೇರಿ ಮಠವನ್ನು ಒಡೆದವರು, ಮಹಾತ್ಮ ಗಾಂಯವರನ್ನು ಕೊಂದವರು, ಪೇಶ್ವೆ ಸಮುದಾಯಕ್ಕೆ ಸೇರಿದವರು ಹೀಗೆ ಎರಡುಮೂರು ವಿಧದ ಬ್ರಾಹ್ಮಣರಿದ್ದಾರೆ ಎಂದು ಹೇಳಿದರು. […]

ಹುಟ್ಟುಹಬ್ಬದ ಪಾರ್ಟಿ ಮೇಲೆ ಗುಂಡಿನ ದಾಳಿ, 8 ಮಂದಿ ಸಾವು

ಜೋಹಾನ್ಸ್‍ಬರ್ಗ್,ಜ.30-ಹುಟ್ಟುಹಬ್ಬದ ಪಾರ್ಟಿ ಮೇಳೆ ಬಂದೂಕುಧಾರಿಗಳ ನಡೆಸಿದ ಗುಂಡಿನ ದಾಳಿಯಲ್ಲಿ ಎಂಟು ಮಂದಿ ಸಾವನ್ನಪ್ಪಿ, ಇತರ ಹಲವಾರು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ಪೋರ್ಟ್ ಎಲಿಜಬೆತ್‍ನ ದಕ್ಷಿಣ ಬಂದರು ನಗರವಾದ ಗೆಬರ್ಹಾದಲ್ಲಿ ಭಾನುವಾರ ಸಂಜೆ ಮನೆ ಮಾಲೀಕರು ಹುಟ್ಟು ಹಬ್ಬದ ಸಂಭ್ರದಲ್ಲಿ ನಿರತರಾಗಿದ್ದರು. ಈ ಸಂದರ್ಭದಲ್ಲಿ ಎಂಟ್ರಿಯಾದ ಇಬ್ಬರು ಅಪರಿಚಿತ ಬಂದೂಕುಧಾರಿಗಳು ಮನ ಬಂದಂತೆ ಗುಂಡು ಹಾರಿಸಿದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿಗೆ ಮನೆ ಮಾಲೀಕರು ಬಲಿಯಾಗಿದ್ದಾರೆ. ಒಟ್ಟು […]

ಕಾದ ಕಬ್ಬಿಣದ ದ್ರವ ಬಿದ್ದು 8 ಮಂದಿ ಕಾರ್ಮಿಕರಿಗೆ ಗಾಯ

ಲೂದಿಯಾನ,ಜ.5- ಕಾರ್ಖಾನೆಯಲ್ಲಿ ಕಾದು ಕರಗಿದ ಕಬ್ಬಿಣದ ದ್ರವ ಮೈ ಮೇಲೆ ಬಿದ್ದಿದ್ದರಿಂದ ಎಂಟು ಮಂದಿ ಕಾರ್ಮಿಕರು ಗಾಯಗೊಂಡಿದ್ದು, ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ. ಪಂಜಾಬ್‍ನ ಲೂದಿಯಾನದ ಸಹ್ನೆವಾಲ್‍ನಲ್ಲಿರುವ ಕಬ್ಬಿಣದ ಕಾರ್ಖಾನೆಯಲ್ಲಿ ಘಟನೆ ನಡೆದಿದೆ. ನಿನ್ನೆ ರಾತ್ರಿ ಪಾಳೆಯದಲ್ಲಿ ಕೆಲಸ ಮಾಡುತ್ತಿದ್ದ ನೌಕರರ ಮೇಲೆ ಕುಲುಮೆಯಲ್ಲಿ ಕಾದು ಕರಗಿದ ಕಬ್ಬಿಣದ ದ್ರವ ಬಿದ್ದಿದೆ. ಗಾಯಗೊಂಡ ಕಾರ್ಮಿಕರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಇಬ್ಬರು ಜೀನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಕೊರೊನಾ ಉಪತಳಿ ಕ್ರಾಕೆನ್‍ ಕುರಿತು […]

ಕಳೆದ 8 ತಿಂಗಳಲ್ಲಿ ತಿಮ್ಮಪ್ಪನ ಹುಂಡಿಗೆ ಹರಿದುಬಂದ ಕಾಣಿಕೆ ಎಷ್ಟು ಗೊತ್ತೇ..?

ಹೈದರಾಬಾದ್, ಡಿ.25- ತಿರುಪತಿ ತಿಮ್ಮಪ್ಪನ ಹುಂಡಿಗೆ ದಾಖಲೆ ಪ್ರಮಾಣದಲ್ಲಿ ಕಾಣಿಕೆ ಸಂಗ್ರಹವಾಗಿದೆ. ಕಳೆದ ಎಂಟು ತಿಂಗಳಲ್ಲಿ ಬರೋಬ್ಬರಿ 1033 ಕೋಟಿ ರೂ. ಕಾಣಿಕೆ ರೂಪದಲ್ಲಿ ಹರಿದು ಬಂದಿದೆ. ಕೊರೊನಾ ತೆರವಿನ ನಂತರ ಇದು ಅತ್ಯಂತ ದೊಡ್ಡ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ ಎಂದು ಟಿಟಿಡಿ ಹೇಳಿದೆ.ಕಳೆದ ಏಪ್ರಿಲ್ ನಂತರ ಪ್ರತಿದಿನ ತಿಮ್ಮಪ್ಪನ ಹುಂಡಿಗೆ ಸರಾಸರಿ 4 ಕೋಟಿ ರೂ. ಕಾಣಿಕೆ ಸಂಗ್ರಹವಾಗುತ್ತಿದೆ. 2022ರ ಮಾರ್ಚ್ ನಂತರ ತಿರುಪತಿಗೆ ಭಕ್ತರು ಭಾರೀ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಜೈಪುರ ಅರಣ್ಯದಲ್ಲಿ ಚಿರತೆಗಳ […]

ಅಯ್ಯಪ್ಪನ ದರ್ಶನ ಮಾಡಿ ವಾಪಸ್ಸಾಗುತ್ತಿದ್ದಾಗ ವಾಹನ ಅಪಾಘಾತ, 8 ಭಕ್ತರ ಸಾವು

ಇಡುಕ್ಕಿ,ಡಿ 24- ಪವಿತ್ರ ಶಬರಿಮಲೆ ಯಾತ್ರೆಯಿಂದ ವಾಪಸಾಗುತ್ತಿದ್ದ ವಾಹನ ಥೆಕ್ಕಡಿ-ಕಂಬಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೆ ಒಳಗಾಗಿ ಎಂಟು ಮಂದಿ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಿನ್ನೆ ತಡ ರಾತ್ರಿ ವರದಿಯಾಗಿದೆ. ತಮಿಳುನಾಡಿನ ಥೇಣಿ ಜಿಲ್ಲೆಯ ಆಂಡಿಪಟ್ಟಿಯ 10 ಮಂದಿ ವ್ಯಾನ್‍ನಲ್ಲಿ ಶಬರಿಮಲೆ ಯಾತ್ರೆಗೆ ತೆರಳಿದ್ದರು. ದರ್ಶನ ಮುಗಿಸಿಕೊಂಡು ವಾಪಾಸ್ ಬರುವಾಗ ನಿನ್ನೆ ರಾತ್ರಿ 10.30ರ ಸುಮಾರಿನಲ್ಲಿ ದಟ್ಟ ಮಂಜು ಕವಿದಿತ್ತು. ತಮಿಳುನಾಡು -ಕೇರಳ ಗಡಿಯ ಕುಮ್ಲಿ-ಕ್ಯೂಂಬಮ್ ಗುಡ್ಡಗಾಡು ಮಾರ್ಗದಲ್ಲಿ ರಸ್ತೆ ಸರಿಯಾಗಿ ಗೋಚರಿಸಿಲ್ಲ. ವ್ಯಾನ್ ಚಾಲಕನ […]

ಟೆಹರಾನ್‍ನ ಜೈಲಿನಲ್ಲಿ ಕೈದಿಗಳ ಮಾರಾಮಾರಿ, ಜೈಲಿಗೆ ಬೆಂಕಿ, 8 ಜನ ಸಾವು

ಇರಾನ್, ಅ.18- ಕೈದಿಗಳು ಕಿತ್ತಾಡಿ ಜೈಲಿಗೆ ಬೆಂಕಿ ಹಾಕಿದ ಪರಿಣಾಮ 8 ಮಂದಿ ಸಜೀವವಾಗಿ ದಹನಗೊಂಡು ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಟೆಹರಾನ್‍ನ ಏವಿಯನ್ ಜೈಲಿನಲ್ಲಿ ನಡೆದಿದೆ. ಘಟನೆಯಲ್ಲಿ ಇಡೀ ಜೈಲು ಬೆಂಕಿಗೆ ಆಹುತಿಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.ಇರಾನ್‍ನಲ್ಲಿ ಹಿಜಾಬ್ ಸಂಘರ್ಷ ತಲೆದೋರಿರುವ ಬೆನ್ನಲ್ಲೇ ಜೈಲಿನಲ್ಲಿ ಕೈದಿಗಳ ಕಿತ್ತಾಟ ಘಟನೆ ನಡೆದಿರುವುದು ಸಾಕಷ್ಟು ಆತಂಕ ಸೃಷ್ಟಿಸಿದೆ. ದರೋಡೆ, ಹೀನ ಅಪರಾಧ ಪ್ರಕರಣಗಳಲ್ಲಿ ಬಂತರಾದ ಹಲವಾರು ಕೈದಿಗಳು ಈ ಜೈಲಿನಲ್ಲಿದ್ದು, ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಈ […]

ಸಿಕಂದ್ರಬಾದ್‍ನಲ್ಲಿ ಧಗಧಗಿಸಿದ ಇ-ಬೈಕ್ ಶೋ ರೂಂ, 8 ಮಂದಿ ಸಾವು

ಸಿಕಂದ್ರಬಾದ್, ಸೆ.13- ತೆಲಂಗಾಣದ ಸಿಕಂದ್ರಬಾದ್‍ನಲ್ಲಿ ಇ-ಬೈಕ್ ಶೋ ರೂಂನಲ್ಲಿ ಬೆಂಕಿ ಅನಾವುತ ಸಂಭವಿಸಿದ್ದು, ಕನಿಷ್ಠ ಎಂಟು ಮಂದಿ ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಪಾಸ್‍ಪೋಟ್ ಕಚೇರಿ ಸಮೀಪ ಇರುವ ಇ-ಬೈಕ್ ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕ್ರಮೇಣ ಅಗ್ನಿಯ ಕೆನ್ನಾಲಿಗೆಗಳು ಶೋ ರೂಂ ಮೇಲಿನ ಮಹಡಿಯಲ್ಲಿರುವ ಲಾಡ್ಜ್ ಮತ್ತು ರೆಸ್ಟೋರೆಂಟ್‍ಗೂ ವ್ಯಾಪಿಸಿದೆ. ಹೋಟೆಲ್‍ನ ಸಿಬ್ಬಂದಿಗಳು ಮತ್ತು ಅತಿಥಿಗಳು ಬೆಂಕಿ ಮತ್ತು ಹೊಗೆಯನ್ನು ಕಂಡು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. […]

ಶ್ರೀಲಂಕಾದಿಂದ ವಲಸೆ ಬಂದ 8 ಮಂದಿ ರಕ್ಷಣೆ

ಚೆನ್ನೈ,ಆ.22-ರಾಮೇಶ್ವರಂ ಬಳಿಯ ಮಿನಿದ್ವೀಪದಿಂದ ಎರಡು ತಿಂಗಳ ಮಗು ಸೇರಿದಂತೆ ಶ್ರೀಲಂಕಾದಿಂದ ಬಂದ 8 ಮಂದಿ ವಲಸಿಗರನ್ನು ಕೋಸ್ಟ್‍ಗಾರ್ಡ್ ಅಧಿಕಾರಿಗಳು ರಕ್ಷಿಸಿದ್ದಾರೆ. ನಿನ್ನೆ ರಾತ್ರಿ ಎಂಟು ಜನರು ದ್ವೀಪದಲ್ಲಿ ಸಿಲುಕಿಕೊಂಡಿದ್ದರು ನಂತರ ಅಧಿಕಾರಿಗಳು ಹೋವರ್‍ಕ್ರಾಫ್ಟ್ ಬಳಸಿ ಅವರನ್ನು ರಕ್ಷಿಸಿ ರಾಮೇಶ್ವರಂಗೆ ಕರೆತಂದಿದ್ದಾರೆ. ಆಶ್ರಯ ಬಯಸಿ ಜಾಫ್ನಾದಿಂದ ಬಂದ ಕುಟುಂಬ ಮತ್ತು ಕಿಲಿನೊಚ್ಚಿಯ ಇನ್ನೊಬ್ಬರು ಸೇರಿದಂತೆ 8 ಮಂದಿ ನಿನ್ನೆ ಶ್ರೀಲಂಕಾದಿಂದ ಹೊರಟು ಧನುಷ್ಕೋಡಿ ಬಳಿಯ ಮಿನಿ-ಸ್ಯಾಂಡ್ ದ್ವೀಪ ತಲುಪಿದ್ದಾರೆ. ಇದೀಗ ಸಿಜಿ ಅಧಿಕಾರಿಗಳು ಅವರನ್ನು ರಕ್ಷಿಸಿ. ಅವರನ್ನು ಮೆರೈನ್ […]