ನಾಳೆ ಪಂಚ ರಾಜ್ಯಗಳ ಫಲಿತಾಂಶ, ನಿರ್ಧಾರವಾಗಲಿದೆ ಬಿಜೆಪಿ ‘ಭವಿಷ್ಯ’

ನವದೆಹಲಿ,ಮಾ.9- ದೇಶದ ಗಮನಸೆಳೆದಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ನಾಳೆ ಪ್ರಕಟವಾಗಲಿದ್ದು, ಅಧಿಕಾರ ಹಿಡಿಯಲು ಈಗಾಗಲೇ ತೆರೆಮರೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಕಸರತ್ತು ಆರಂಭಿಸಿವೆ. ಕೇಂದ್ರ ಸರ್ಕಾರಕ್ಕೆ ಭಾರೀ ಸವಾಲಾಗಿದ್ದ ಕೃಷಿ ಕಾಯ್ದೆಗಳನ್ನು ರದ್ದುಪಡಿಸಿದ ನಂತರ ನಡೆದಿದ್ದ ಮೊದಲ ಚುನಾವಣೆ ಇದಾಗಿದ್ದು, ಆಡಳಿತಾರೂಢ ಎನ್‍ಡಿಎ, ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಇತರೆ ಪ್ರಾದೇಶಿಕ ಪಕ್ಷಗಳಿಗೆ ಅತ್ಯಂತ ನಿರ್ಣಾಯಕ ಎನಿಸಿದೆ. ಅತಿದೊಡ್ಡ ರಾಜ್ಯವಾದ ಉತ್ತರಪ್ರದೇಶ(401), ಉತ್ತರಖಂಡ್(70), ಮಣಿಪುರ(60), ಪಂಜಾಬ್(117) ಹಾಗೂ ಗೋವಾ(40) ರಾಜ್ಯಗಳ ಫಲಿತಾಂಶ ನಾಳೆ ಪ್ರಕಟವಾಗಲಿದೆ. ಬೆಳಗ್ಗೆ […]